ಕರ್ನಾಟಕ

karnataka

ETV Bharat / state

ಹಾಡ ಹಗಲೇ ಚಿನ್ನದಂಗಡಿಗೆ ನುಗ್ಗಿದ ಕಳ್ಳರು: ಗುಂಡು ಹಾರಿಸಿ ಬೆದರಿಕೆ - ಚಿಕ್ಕಮಗಳೂರು ಕ್ರೈಮ್​ ಲೆಟೆಸ್ಟ್ ನ್ಯೂಸ್

ಹಾಡ ಹಗಲೇ ಚಿನ್ನದಂಗಡಿಗೆ ಕನ್ನ ಹಾಕಲು ಖದೀಮರು ಯತ್ನಿಸಿರುವ ಘಟನೆ ಚಿಕ್ಕಮಗಳೂರಲ್ಲಿ ನಡೆದಿದೆ.

Thief trying to theft jewellery shop at Chikmagalur
ಹಾಡ ಹಗಲೇ ಚಿನ್ನದಂಗಡಿಗೆ ನುಗ್ಗಿದ ಕಳ್ಳರು

By

Published : Jul 11, 2020, 12:53 PM IST

Updated : Jul 11, 2020, 1:05 PM IST

ಚಿಕ್ಕಮಗಳೂರು:ಹಾಡ ಹಗಲೇ ಚಿನ್ನದಂಗಡಿಗೆ ನುಗ್ಗಿದ ಖದೀಮರು ಪಿಸ್ತೂಲಿನಿಂದ 3 ಸುತ್ತು ಗುಂಡು ಹಾರಿಸಿ ಚಿನ್ನಾಭರಣ ದರೋಡೆ ಮಾಡಲು ಯತ್ನಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಹಾಡ ಹಗಲೇ ಚಿನ್ನದಂಗಡಿಗೆ ನುಗ್ಗಿದ ಕಳ್ಳರು

ಇಂದು ಬೆಳಗ್ಗೆ ಬೈಕ್​ನಲ್ಲಿ ಬಂದ ಮೂವರು ಖದೀಮರು, ನಗರದ ಎಂ.ಜಿ ರಸ್ತೆಯಲ್ಲಿರುವ ಕೇಸರಿ ಚಿನ್ನದ ಅಂಗಡಿಗೆ ನುಗ್ಗಿದ್ದರು. ಅಂಗಡಿಯೊಳಗೆ ಮೂರು ಸುತ್ತು ಗುಂಡು ಹಾರಿಸಿ ಅಲ್ಲಿದ್ದ ವಸ್ತುಗಳನ್ನು ಪುಡಿ ಪುಡಿ ಮಾಡಿ ಚಿನ್ನಾಭರಣ ಕಳ್ಳತನ ಮಾಡಲು ಯತ್ನಿಸಿ ಪರಾರಿಯಾಗಿದ್ದಾರೆ. ಅದೃಷ್ಟವಶಾತ್​ ಘಟನೆಯಲ್ಲಿ ಅಂಗಡಿ ಮಾಲೀಕನಿಗೆ ಯಾವುದೇ ತೊಂದರೆಯಾಗಿಲ್ಲ.

ವಿಷಯ ತಿಳಿದು ಸ್ಥಳಕ್ಕೆ ಜಿಲ್ಲಾ ಎಸ್ಪಿ ಅಕ್ಷಯ್ ಮಚ್ಚಿಂದ್ರ ಹಾಗೂ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದರು.

Last Updated : Jul 11, 2020, 1:05 PM IST

ABOUT THE AUTHOR

...view details