ಕರ್ನಾಟಕ

karnataka

ETV Bharat / state

ಅವರದ್ದು ತಂದೆ-ಮಕ್ಕಳ ಸಂಬಂಧವಲ್ಲ, ಪರಸ್ಪರರನ್ನು ಮುಗಿಸುವ ರಾಜಕೀಯ ದುಷ್ಟಕೂಟ: ಸಿಟಿ ರವಿ

ಕುಮಾರಸ್ವಾಮಿ, ದೇವೇಗೌಡ ಅವರ ಸಂಬಂಧ ತಂದೆ ಮಕ್ಕಳಂತೆ ಇರಲಿಲ್ಲ. ಪರಸ್ಪರರನ್ನು ಮುಗಿಸಲು ರಚಿಸಿಕೊಂಡ ರಾಜಕೀಯ ದುಷ್ಟಕೂಟ ಎಂಬಂತಿದೆ ಎಂದು ಸಚಿವ ಸಿ.ಟಿ.ರವಿ ಟೀಕಿಸಿದ್ದಾರೆ

they wanted to finish other parties off politically

By

Published : Aug 26, 2019, 6:45 PM IST

ಚಿಕ್ಕಮಗಳೂರು:ಜೆಡಿಎಸ್ ಮತ್ತು ಕಾಂಗ್ರೆಸ್​ನದು ವಿಶ್ವಾಸದ ಮೈತ್ರಿ ಆಗಿರಲಿಲ್ಲ. ಈ ಹಿಂದೆ ಬಿಜೆಪಿ ಮುಗಿಸಲು ರಚಿಸಿದ ರಾಜಕೀಯ ಸಂಚಿನ ಕೂಟ. ಇದು ಆರೋಪ ಅಲ್ಲ. ಈಗ ಸತ್ಯ ಏನೆಂಬುದು ಸಾಬೀತಾಗಿದೆ ಎಂದು ಸಚಿವ ಸಿ.ಟಿ.ರವಿ ಆರೋಪಿಸಿದರು.

ಕರಗಡ ನೀರಾವರಿ ಕಾಮಗಾರಿ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕುಮಾರಸ್ವಾಮಿ, ದೇವೇಗೌಡ ಅವರ ಸಂಬಂಧ ತಂದೆ ಮಕ್ಕಳಂತೆ ಇರಲಿಲ್ಲ. ಪರಸ್ಪರರನ್ನು ಮುಗಿಸಲು ರಚಿಸಿಕೊಂಡ ರಾಜಕೀಯ ದುಷ್ಟಕೂಟ ಎಂಬಂತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಸಚಿವ ಸಿ ಟಿ ರವಿ

ಅತೃಪ್ತರ ಇಂದಿನ ಪರಿಸ್ಥಿಗೆ ಸಭಾಧ್ಯಕ್ಷ ರಮೇಶ್ ಕುಮಾರ್ ಕಾರಣ. ಅನರ್ಹರಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಶೀಘ್ರದಲ್ಲೇ​ ತೀರ್ಪು ಹೊರ ಬರಲಿದೆ. ಬಳಿಕ ಮುಂದಿನ ನಡೆಯ ಕುರಿತು ಚರ್ಚಿಸಲಾಗುತ್ತದೆ. ಬಿಜೆಪಿ ಕೇಡರ್ ಬೇಸ್ಡ್ ಪಾರ್ಟಿಯಾಗಿದ್ದು, ಚುನಾವಣೆ ಬಗ್ಗೆ ಆತಂಕ ಇಲ್ಲ. ಸರ್ಕಾರ ಇರುವವರೆಗೂ ಉತ್ತಮ ಆಡಳಿತ ನೀಡುತ್ತೇವೆ ಎಂದು ಭರವಸೆ ನೀಡಿದರು.

ಖಾತೆ ಹಂಚಿಕೆ‌ ವಿಚಾರದಲ್ಲಿ ನಾನು ಮಂತ್ರಿ ಸ್ಥಾನವನ್ನೇ ಬಯಸಿರಲಿಲ್ಲ. ಹಾಗಾಗಿ ಇದೇ ಖಾತೆ ಬೇಕು ಬೇಕು ಎಂದೂ ಕೇಳುವುದಿಲ್ಲ, ಕೊಟ್ಟಿದ್ದನ್ನೂ ಸ್ವೀಕರಿಸುತ್ತೇನೆ ಎಂದರು.

ABOUT THE AUTHOR

...view details