ಚಿಕ್ಕಮಗಳೂರು; ಜಿಲ್ಲೆಯ ಮಲೆನಾಡು ಭಾಗವಾದ ಮೂಡಿಗೆರೆ ತಾಲೂಕಿನ ಸುತ್ತ ಮುತ್ತಲಿನ ಪ್ರದೇಶದಲ್ಲಿ ಭೂಕುಸಿತದ ವಿಚಿತ್ರ ಶಬ್ದದಿಂದ ಆತಂಕದಲ್ಲಿದ್ದಂತಹ ಜನರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ಮಹೇಶ್ ಈ ಕುರಿತು ಸ್ವಷ್ಟನೆ ನೀಡಿದ್ದು, ಜನರು ಯಾವುದೇ ರೀತಿಯಾ ಆತಂಕ ಪಡುವ ಅಗತ್ಯವಿಲ್ಲ, ಮಲೆನಾಡಿನಲ್ಲಿ ಭೂಕಂಪನವಾಗಿಲ್ಲ ಎಂದಿದ್ದಾರೆ.
ಮಲೆನಾಡಿನಲ್ಲಿ ಭೂಕಂಪನವಾಗಿಲ್ಲ,ಆತಂಕ ಪಡುವ ಅಗತ್ಯವಿಲ್ಲ; ಮಹೇಶ್ ಜನರು ಸಾಮಾಜಿಕ ಜಾಲತಾಣದಲ್ಲಿ ಭೂಕಂಪನದ ಚರ್ಚೆ ಮಾಡುತ್ತಿದ್ದಾರೆ. ಜನರು ಯಾವುದೇ ರೀತಿಯಾ ಆತಂಕ ಪಡುವ ಅಗತ್ಯವಿಲ್ಲ, ಮಲೆನಾಡಿನಲ್ಲಿ ಭೂಕಂಪನವಾಗಿಲ್ಲ. ಈ ಕುರಿತು ಕಳೆದ 15 ದಿನ ಗಳ ಕಾಲ ಸರ್ವೇ ನಡೆಸಿ ಸರ್ಕಾರಕ್ಕೆ ವರದಿ ನೀಡಲಾಗಿದೆ ಎಂದು ಹೇಳಿದರು.
ಭೂ ಕುಸಿತ, ರಸ್ತೆ ಬಿರುಕು ಗಳಿಗೆ ಮಹಾ ಮಳೆ, ಮಾನವ ಹಸ್ತಕ್ಷೇಪ, ಅವೈಜ್ಞಾನಿಕ ರಸ್ತೆ ಕಾಮಗಾರಿಯೇ ಕಾರಣವಾಗಿದ್ದು, ಮಲೆನಾಡಿನಲ್ಲಿ ಯಾವುದೇ ಭೂ ಕಂಪನ, ಭೂಮಿ ಸ್ಫೋಟವಾಗಿಲ್ಲ. ಅಂತರ್ ಜಾಲದಲ್ಲಿ ನೀರಿನ ಮೂಲಗಳಿಗೆ ಸಂಘರ್ಷಣೆಯಾದ ವೇಳೆ ಭೂಮಿಯಿಂದ ಶಬ್ದ ಕೇಳಿ ಬರುತ್ತೆ. ಇದನ್ನು ಭೂ ಕಂಪನ ಎಂದೂ ತಿಳಿಯಬಾರದು ಎಂದೂ ಮಲೆನಾಡಿನ ಜನರಿಗೆ ಈ ಟಿವಿ ಭಾರತ್ ಮೂಲಕ ಧೈರ್ಯ ತುಂಬಿದ್ದಾರೆ.
ಅವರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದ್ದು, ಈ ಹಿಂದೇ ಭೂ ವಿಜ್ಞಾನ ತಜ್ಞರು ಹಾಗೂ ಭೂ ವಿಜ್ಞಾನಿಗಳಾದ ಕಪಿಲ್ ಸಿಂಗ್ ಹಾಗೂ ಕಮಲ್ ಕಮಾರ್ ನೇತೃತ್ವದಲ್ಲಿ ತಾಲೂಕಿನ ಮಲೆನಾಡು ಭಾಗದಲ್ಲಿ ಅಧ್ಯಯನ ಮಾಡಿದ್ದರು.