ಚಿಕ್ಕಮಗಳೂರು: ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮೂಲಭೂತ ಸೌಕರ್ಯಗಳಿಲ್ಲದೇ ಮೂಡಿಗೆರೆ ತಾಲೂಕಿನ ಮಕ್ಕಿ ಗ್ರಾಮದ ಜನರು ಗ್ರಾಮವನ್ನೇ ತೊರೆಯುವ ಸ್ಥಿತಿಗೆ ಬಂದಿದ್ದಾರೆ.
ಮೂಲಭೂತ ಸೌಕರ್ಯಗಳಿಲ್ಲದ ಗ್ರಾಮ ತೊರೆಯಲು ಹೊರಟಿದ್ದಾರೆ ಮಕ್ಕಿ ಗ್ರಾಮಸ್ಥರು
ಮೂಡಿಗೆರೆ ತಾಲೂಕಿನ ಮಕ್ಕಿ ಗ್ರಾಮದಲ್ಲಿ ಯಾವುದೇ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲದೇ ಹಾಳು ಕೊಂಪೆಯಂತಾಗಿದೆ. ಮೂಲಭೂತ ಸೌಲಭ್ಯಗಳಿಲ್ಲದೆ ಇಲ್ಲಿನ ಜನರು ಪರದಾಟ ನಡೆಸಿದ್ದು, ಏನೂ ಗೊತ್ತಿಲ್ಲ ಎಂಬಂತೆ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತುಕೊಂಡಿದೆ. ಪರಿಣಾಮ ಮಕ್ಕಿ ಗ್ರಾಮದ ಜನರು ಗ್ರಾಮವನ್ನೇ ತೊರೆಯುವ ಸ್ಥಿತಿಗೆ ಬಂದಿದ್ದಾರೆ.
ಮೂಡಿಗೆರೆ ತಾಲೂಕಿನ ಮಕ್ಕಿ ಗ್ರಾಮ ಹಾಳು ಕೊಂಪೆಯಂತಾಗಿದ್ದು, ಸರಿಯಾದ ಅಭಿವೃದ್ದಿ ಕಾಣದೇ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. ಇಲ್ಲಿನ ಮನೆಗಳಂತೂ ಸಂಪೂರ್ಣವಾಗಿ ಶಿಥಿಲಾವಸ್ಥೆಗೊಂಡಿವೆ. ಕುಡಿಯಲು ನೀರು, ರಸ್ತೆ ಇನ್ನಿತರೆ ಸೂಕ್ತ ವ್ಯವಸ್ಥೆಯಿಲ್ಲದೆ ಇಲ್ಲಿನ ಜನರು ಗ್ರಾಮವನ್ನೇ ಬಿಡುವಂತಾಗಿದೆ.
ನಿಡುವಾಳೆ ಗ್ರಾಮ ಪಂಚಾಯತ್ನ ದಿವ್ಯ ನಿರ್ಲಕ್ಷ್ಯಕ್ಕೆ ಉತ್ತಮ ರಸ್ತೆ ಇಲ್ಲದೆ ಕೆಲ ಮಕ್ಕಳು ಶಾಲೆ ತೊರೆದಿದ್ದಾರೆ. ಕನಿಷ್ಠ ಮೂಲಭೂತ ಸೌಕರ್ಯವಿಲ್ಲದೆ ಇಲ್ಲಿನ ಜನರು ಪರದಾಟ ನಡೆಸುತ್ತಿದ್ದು, ಏನೂ ಗೊತ್ತಿಲ್ಲ ಎಂಬಂತೆ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತುಕೊಂಡಿದೆ. ಸದ್ಯ ಗ್ರಾಮದಲ್ಲಿ ಬೆರಳೆಣಿಕೆಯಷ್ಟು ಜನರು ಮಾತ್ರ ವಾಸವಿದ್ದು, ಕುಡಿಯಲು ನೀರು, ರಸ್ತೆ ಸೌಲಭ್ಯ, ಇತರೆ ಮೂಲಭೂತ ಸೌಲಭ್ಯವನ್ನು ಕಲ್ಪಿಸಲು ಇಲ್ಲಿನ ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.