ಕರ್ನಾಟಕ

karnataka

ETV Bharat / state

ನೆರೆ ಸಂತ್ರಸ್ತರಿಗೆ ರಾಜ್ಯ ಸರ್ಕಾರದಿಂದ ಯಾವುದೇ ಅನುಕೂಲವಿಲ್ಲ; ರಾಜೇಗೌಡ .... - ಕೇಂದ್ರ ಸರ್ಕಾರದ ವಿರುದ್ದವೂ ಆಕ್ರೋಶ

ಚಿಕ್ಕಮಗಳೂರು ಜಿಲ್ಲೆಯಲ್ಲಿ ನೆರೆ ಬಂದು ಸಾವಿರಾರೂ ಜನರು ಬೀದಿಗೆ ಬಿದ್ದಿದ್ದು, ರಾಜ್ಯ ಸರ್ಕಾರದಿಂದ ಯಾವುದೇ ರೀತಿಯಾ ಅನುಕೂಲ ಆಗಿಲ್ಲ. ರೈತ ಚನ್ನಪ್ಪ ಗೌಡ ಮೃತ ಪಟ್ಟ ಮೇಲೂ ಜಿಲ್ಲಾ ಉಸ್ತುವಾರಿ ಸಚಿವ ಸಿ ಟಿ ರವಿ ಹಾಗೂ ಮಾಧು ಸ್ವಾಮಿ ಅವರು ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿಲ್ಲ ಎಂದು ಶಾಸಕ ರಾಜೇಗೌಡ ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.

ರಾಜ್ಯ ಸರ್ಕಾರದ ವಿರುದ್ದಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

By

Published : Sep 16, 2019, 7:27 PM IST

ಚಿಕ್ಕಮಗಳೂರು:ಜಿಲ್ಲೆಯಲ್ಲಿ ನೆರೆ ಬಂದು ಸಾವಿರಾರೂ ಜನರು ಬೀದಿಗೆ ಬಿದ್ದಿದ್ದು, ರಾಜ್ಯ ಸರ್ಕಾರದಿಂದ ಯಾವುದೇ ರೀತಿಯ ಅನುಕೂಲ ಆಗಿಲ್ಲ. ರೈತ ಚನ್ನಪ್ಪ ಗೌಡ ಮೃತ ಪಟ್ಟ ಮೇಲೂ ಜಿಲ್ಲಾ ಉಸ್ತುವಾರಿ ಸಚಿವ ಸಿ ಟಿ ರವಿ ಹಾಗೂ ಮಾಧು ಸ್ವಾಮಿ ಅವರು ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿಲ್ಲ ಎಂದು ಶಾಸಕ ರಾಜೇಗೌಡ ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದರು.

ರಾಜ್ಯ ಸರ್ಕಾರದ ವಿರುದ್ದಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

ಕಳೆದ ಎರಡೂ ದಿನಗಳ ಹಿಂದೆ ಕಳಸದ ಕಾರ್ಗದ್ದೆ ಗ್ರಾಮದ ಚನ್ನಪ್ಪ ಗೌಡ ಅತಿವೃಷ್ಟಿಯ ಹಾನಿಗೆ ಮನನೊಂದು,ಆತ್ಮ ಹತ್ಯೆಗೆ ಶರಣಾಗಿದ್ದರು. ಹೀಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ದ ಶೃಂಗೇರಿ ಶಾಸಕ ಟಿ ಡಿ ರಾಜೇಗೌಡರ ನೇತೃತ್ವದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಶೃಂಗೇರಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ನೆರೆ ವೀಕ್ಷಣೆ ಮಾಡಿದರೂ ಕಾಟಚಾರಕ್ಕೆ ಮಾಡಿದ್ದಾರೆ. ಇದರಿಂದ ನಿರಾಶ್ರಿತರಿಗೆ ಯಾವುದೇ ರೀತಿಯಾ ಅನುಕೂಲ ಆಗಿಲ್ಲ. ಅಲ್ಲದೇ ಕೇಂದ್ರದಲ್ಲಿಯೂ ಬಿಜೆಪಿ ಸರ್ಕಾರವಿದ್ದು, ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರ ಇದೆ.ಆದರೇ ಜನರಿಗೆ ಮಾತ್ರ ಯಾವುದೇ ಅನುಕೂಲ ಆಗಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕದಲ್ಲಿ ನೆರೆ ಬಂದಾಗ ನಿರ್ಮಲ ಸೀತಾರಾಮನ್ ಹಾಗೂ ಅಮಿತ್ ಶಾ ಕಾಟಚಾರಕ್ಕೆ ಬಂದೂ ಹೋಗಿದ್ದು ಒಂದು ರೂ. ಬಿಡುಗಡೆ ಮಾಡಿಲ್ಲವೆಂದು ಕೇಂದ್ರ ಸರ್ಕಾರದ ವಿರುದ್ದವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details