ಚಿಕ್ಕಮಗಳೂರು :ತಾಲೂಕಿನ ಸಖರಾಯಪಟ್ಟಣದ ಚಿಕ್ಕಮಗಳೂರು-ಕಡೂರು ಹೆದ್ದಾರಿ ಪಕ್ಕದಲ್ಲಿರುವ ಚುರ್ಚೆಗುಡ್ಡದಲ್ಲಿರುವ ಶ್ರೀಗಂಧದ ಮರಗಳ ಮೇಲೆ ಮರಗಳ್ಳರ ಕಣ್ಣು ಬಿದ್ದಿದೆ. ಒಂದು ವಾರದಲ್ಲಿ 50ಕ್ಕೂ ಹೆಚ್ಚು ಗಂಧದ ಮರಗಳು ಕಳ್ಳರ ಪಾಲಾಗಿವೆ.
ಚುರ್ಚೆಗುಡ್ಡ ಸುಮಾರು 10 ಸಾವಿರ ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಇಲ್ಲಿ ಸ್ವಾಭಾವಿಕವಾಗಿ ಬೆಳೆದಿರುವ ಶ್ರೀಗಂಧದ ಮರಗಳ ಮೇಲೆ ಕಣ್ಣು ಹಾಕಿರುವ ಕಳ್ಳರು, ಮರಗಳನ್ನು ಕಡಿದು ಎಸ್ಕೇಪ್ ಆಗ್ತಿದ್ದಾರೆ. ಮರಗಳ್ಳರ ಗ್ಯಾಂಗ್, ಮರ ಕಡಿಯುವ ಮುನ್ನ ಕಾಡಿನ ಯಾವುದಾದರು ಒಂದು ಭಾಗಕ್ಕೆ ಬೆಂಕಿಯಟ್ಟು, ಇನ್ನೊಂದು ಭಾಗದಲ್ಲಿ ಸಲೀಸಾಗಿ ಮರಗಳ್ಳತನ ಮಾಡುತ್ತಿದ್ದಾರೆ. ಈ ಮೂಲಕ ಅರಣ್ಯ ಅಧಿಕಾರಿಗಳ ದಿಕ್ಕು ತಪ್ಪಿಸಲಾಗ್ತಿದೆ.