ಚಿಕ್ಕಮಗಳೂರು :ಜಿಲ್ಲೆಯಲ್ಲಿ ಕಾಫಿ, ಅಡಿಕೆ, ಮೆಣಸು ಬೆಳೆಗಳನ್ನು ಯಥೇಚ್ಛವಾಗಿ ಬೆಳೆಯುವ ಹಿನ್ನೆಲೆ, ಭತ್ತ ಬೆಳೆಯುವ ರೈತರೇ ಕಣ್ಮರೆಯಾಗುತ್ತಿದ್ದಾರೆ. ಈ ಬೆಳವಣಿಗೆಗಳ ಮಧ್ಯೆ ಜಿಲ್ಲೆಯ ಮಲೆನಾಡಿನ ಕೆಲ ಭಾಗದಲ್ಲಿ ಭತ್ತದ ನಾಟಿಯನ್ನು ಅನಾದಿ ಕಾಲದಿಂದಲೂ ಕೆಲ ರೈತರು ಮಾಡಿಕೊಂಡು ಬಂದಿದ್ದಾರೆ.
ಮಲೆನಾಡಿನಲ್ಲಿ ಭತ್ತ ನಾಟಿ ವೇಳೆ ಸೋಬಾನೆ ಸೊಗಡು ಭತ್ತ ನಾಟಿ ಮಾಡುವುದಷ್ಟೇ ಅಲ್ಲ.. ನಾಟಿಯ ಜೊತೆ, ನಾಟಿ ಪದ ಹಾಗೂ ಜನಪದ ಹಾಡು, ಸೋಬಾನೆ ಹಾಡುಗಳನ್ನು ಹಾಡುತ್ತ ನಾಟಿ ಮಾಡುವ ವಿಧಾನ ಈ ಭಾಗದ ಜಾನಪದ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ.
ಅದೇ ರೀತಿ ಮೂಡಿಗೆರೆ ತಾಲೂಕಿನ ಬಾಳೂರಿನಲ್ಲಿ ಸತೀಶ್ ಎಂಬವರ ಗದ್ದೆಯಲ್ಲಿ ಭತ್ತದ ನಾಟಿ ಕಾರ್ಯ ನಡೆಯುತ್ತಿದ್ದು, ಈ ವೇಳೆ ಹತ್ತಾರು ಮಹಿಳೆಯರು ನಾಟಿ ಪದವನ್ನು ಹಾಗೂ ಸೋಬಾನೆ ಪದವನ್ನು ಹಾಡುತ್ತಿರುವುದು ಕಂಡುಬಂತು. ಅಲ್ಲದೆ ಈ ಪದಗಳಿಗೆ ಪುರುಷರು ಕೂಡ ಧ್ವನಿಗೂಡಿಸಿ ಸಂಭ್ರಮ ಹಾಗೂ ಸಡಗರದಿಂದ ಈ ನಾಟಿ ಕಾರ್ಯದಲ್ಲಿ ತೊಡಗಿದ್ದು ವಿಶೇಷವಾಗಿತ್ತು.
ನಮ್ಮ ಸಂಸ್ಕೃತಿ ಆದಂತಹ ನಾಟಿ ಪದಗಳು ಹಾಗೂ ಸೋಬಾನೆ ಪದಗಳನ್ನು ಉಳಿಸಿ ಬೆಳೆಸುವ ಕೆಲಸವನ್ನು ಮಲೆನಾಡಿನ ಕೆಲ ರೈತರು ಹಾಗೂ ಮಹಿಳೆಯರು ಈ ಮೂಲಕ ಮಾಡುತ್ತಿದ್ದಾರೆ. ಈ ಭತ್ತವನ್ನು ಬೆಳೆಯುವುದರಿಂದ ರೈತರಿಗೆ ನಷ್ಟವೇ ಜಾಸ್ತಿ, ಬೆಳೆಗೆ ಖರ್ಚು ಮಾಡಿದ ಹಣವು ಬರುವುದಿಲ್ಲ. ಕೂಲಿ ಕಾರ್ಮಿಕರಿಗೆ ನೀಡುವ ಹಣ, ಗೊಬ್ಬರಕ್ಕಾಗಿ ಬಳಸುವ ದುಡ್ಡು ಹಾಗೂ ಕಟಾವಿಗೆ ಬಳಸುವ ಹಣ ಹೆಚ್ಚು ಇರುತ್ತದೆ. ಈ ಬೆಳೆಯಲ್ಲಿ ನಷ್ಟವಾದರೂ ನಾವು ಅದನ್ನು ಬೆಳೆಯುತ್ತಿದ್ದೇವೆ ಎನ್ನುತ್ತಾರೆ ರೈತರು.
ಇದನ್ನೂ ಓದಿ : MRP ದರ ಪ್ರಕಟಿಸದ ಟ್ರ್ಯಾಕ್ಟರ್ ಡೀಲರ್ಗಳಿಗೆ ಬಿಸಿ ಮುಟ್ಟಿಸಿದ ಸಚಿವೆ ಶೋಭಾ ಕರಂದ್ಲಾಜೆ