ಕರ್ನಾಟಕ

karnataka

ETV Bharat / state

ಹಣ ನೀಡದಿದ್ದಕ್ಕೆ ಪಾರ್ಶ್ವವಾಯು ಪೀಡಿತ ತಂದೆಯನ್ನ ಕೊಡಲಿಯಿಂದ ಹೊಡೆದು ಕೊಂದ ಮಗ! - ಚಿಕ್ಕಮಗಳೂರಲ್ಲಿ ತಂದೆಯನ್ನೆ ಕೊಲೆ ಮಾಡಿದ ಪಾಪಿ ಮಗ

ಮದ್ಯದ ಅಮಲಿನಲ್ಲಿದ್ದ ಮಗ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ತಂದೆ ತಲೆಗೆ ಕೊಡಲಿಯಿಂದ ಹಲ್ಲೆ ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ತಂದೆ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

The son who murdered the father in Chikkamagaluru
ಪಾರ್ಶ್ವವಾಯು ಪೀಡಿತ ತಂದೆಯನ್ನ ಕೊಡಲಿಯಿಂದ ಹೊಡೆದು ಕೊಂದ ಮಗ

By

Published : May 29, 2021, 9:08 AM IST

ಚಿಕ್ಕಮಗಳೂರು: ಮದ್ಯದ ಅಮಲಿನಲ್ಲಿದ್ದ ಮಗ ತನ್ನ ತಂದೆ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ತಂದೆ ಸಾವನ್ನಪ್ಪಿರುವ ಘಟನೆ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಚನ್ನಹಡ್ಲು ಗ್ರಾಮದಲ್ಲಿ ನಡೆದಿದೆ.

ಪಾರ್ಶ್ವವಾಯು ಪೀಡಿತ ತಂದೆಯನ್ನ ಕೊಡಲಿಯಿಂದ ಹೊಡೆದು ಕೊಂದ ಮಗ

ಸುಂದರ ಪೂಜಾರಿ (52) ಮೃತ ದುರ್ದೈವಿಯಾಗಿದ್ದಾರೆ. ಹಿರಿಯ ಮಗ ನಿತೇಶ್ ಎಂಬಾತ ಈ ಕೃತ್ಯ ಎಸಗಿದ್ದು, ವಿಶೇಷ ಚೇತನ ಇಬ್ಬರು ಮಕ್ಕಳು, ಪತ್ನಿ ಜೊತೆ ಸುಂದರ ಪೂಜಾರಿ ವಾಸವಿದ್ದರು. ಎಲ್ಲರನ್ನೂ ಬಿಟ್ಟು ಹಿರಿಯ ಮಗ ನಿತೇಶ್ ಬೆಂಗಳೂರು ಸೇರಿಕೊಂಡಿದ್ದ.

ಇದನ್ನೂ ಓದಿ : ಪಾರ್ಶ್ವವಾಯು ಪೀಡಿತ ತಂದೆ ತಲೆಗೆ ಕೊಡಲಿಯಿಂದ ಹೊಡೆದ ಮಗ!

ಲಾಕ್​​ಡೌನ್ ಹಿನ್ನೆಲೆಯಲ್ಲಿ 1 ತಿಂಗಳ ಹಿಂದೆ ಮನೆಗೆ ಪಾಪಿ ಪುತ್ರ ಮರಳಿ ಬಂದಿದ್ದ. ಹಣ ನೀಡುವಂತೆ ತಂದೆ-ತಾಯಿಯನ್ನು ನಿತೇಶ್ ಪೀಡಿಸುತ್ತಿದ್ದ. ಹಣ ನೀಡದ್ದಕ್ಕೆ ಕುಪಿತಗೊಂಡು ತಂದೆಗೆ ಕಳೆದ ಎರಡು ದಿನಗಳ ಹಿಂದೆ ಮನೆಯಲ್ಲಿಯೇ ಕೊಡಲಿಯಿಂದ ಹಲ್ಲೆ ನಡೆಸಿದ್ದ. ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ತಂದೆ ಸಾವನ್ನಪ್ಪಿದ್ದಾರೆ. ಬಾಳೂರು ಪೊಲೀಸರು ಆರೋಪಿಯನ್ನ ಬಂಧನ ಮಾಡಿದ್ದು, ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details