ಕರ್ನಾಟಕ

karnataka

ETV Bharat / state

ಪ್ರಾದೇಶಿಕ ಪಕ್ಷ ತುಂಬಾ ಅವಶ್ಯಕತೆ ಇದೆ: ಜೆಡಿಎಸ್ ಮುಖಂಡ ವೈ.ಎಸ್​.ವಿ ದತ್ತಾ - chikkamagaluru JDS leader YSV Dutta

ಜೆಡಿಎಸ್ ಪಕ್ಷಕ್ಕೆ ಚೈತ್ಯನ್ಯ ತುಂಬ ಬೇಕಾಗಿದೆ ಎಂದು ಜೆಡಿಎಸ್ ಮುಖಂಡ ವೈ ಎಸ್ ವಿ ದತ್ತಾ ತಿಳಿಸಿದರು.

chikkamagaluru
ವೈ.ಎಸ್​.ವಿ ದತ್ತಾ

By

Published : Jan 4, 2020, 11:22 PM IST

ಚಿಕ್ಕಮಗಳೂರು: ಜೆಡಿಎಸ್ ಪಕ್ಷಕ್ಕೆ ಚೈತ್ಯನ್ಯ ತುಂಬ ಬೇಕಾಗಿದೆ. ವಾಸ್ತವವಾಗಿ ಈ ಪಕ್ಷ ತುಂಬಾ ಗಟ್ಟಿಯಾಗಿದೆ ಎಂದರೇ ಸುಳ್ಳಾಗುತ್ತೆ. ಪ್ರಾದೇಶಿಕ ಪಕ್ಷ ತುಂಬಾ ಅವಶ್ಯಕತೆ ಇದೆ. ಆದರೇ ಜನಕ್ಕೆ ಎಲ್ಲೋ ಒಂದು ಕಡೆ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಇದ್ಯಾ ಎಂಬುದನ್ನು ತಿಳಿಸಲು ನಮ್ಮ ಪಕ್ಷದಲ್ಲಿ ವಿಫಲರಾಗಿದ್ದೇವೆ ಎಂದು ಜೆಡಿಎಸ್ ಮುಖಂಡ ವೈ ಎಸ್ ವಿ ದತ್ತಾ ಅಭಿಪ್ರಾಯಪಟ್ಟರು.

ಜೆಡಿಎಸ್ ಮುಖಂಡ ವೈ.ಎಸ್​.ವಿ ದತ್ತಾ

ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಎಲ್ಲಾ ರಾಜ್ಯದಲ್ಲಿ ಕುಸಿಯುತ್ತಿದೆ. ಕಾಂಗ್ರೆಸ್ ಪಕ್ಷ, ಪ್ರಾದೇಶಿಕ ಪಕ್ಷ ಇಟ್ಟುಕೊಂಡು ಊರುಗೋಲು ಇಟ್ಟುಕೊಂಡು ನಡೆಯುತ್ತಿದೆ. ದೇಶದಲ್ಲಿ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಇದೆ ಎಂದು ಜನರು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ದೇವೇಗೌಡರು ತಮ್ಮ 86 ವಯಸ್ಸಿನವರೆಗೂ ಈ ಪಕ್ಷವನ್ನು ಉಳಿಸಿಕೊಂಡು ಬಂದಿದ್ದಾರೆ. ನಮ್ಮ ಪಕ್ಷ ಗಟ್ಟಿ ಇಲ್ಲ ಸಡಿಲವಾಗಿದೆ ಎಂಬ ಭಾವನೆ ಬಂದಿದೆ ಎಂದರು.

ಇನ್ನು ಜನತಾ ಪರಿವಾರದ ನಾಯಕರು ಬೇಸರಗೊಂಡಿದ್ದಾರೆ. ಮನೆಯಲ್ಲಿ ಕುಳಿತಿದ್ದಾರೆ, ಅವರಿಗೆ ತಮ್ಮದೇ ಆದ ಶಕ್ತಿ ಇದೆ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡರೆ ತಮ್ಮ ಈ ಪಕ್ಷವನ್ನು ಕಟ್ಟಬಹುದು ಎಂದು ಜೆಡಿಎಸ್ ಮುಖಂಡ ವೈ ಎಸ್ ವಿ ದತ್ತಾ ಅಭಿಪ್ರಾಯ ವ್ಯಕ್ತಪಡಿಸಿದರು.

ABOUT THE AUTHOR

...view details