ಚಿಕ್ಕಮಗಳೂರು:ನಾಲ್ಕು ಕಾಡಾನೆಗಳು ಕಳೆದ ಕೆಲ ವರ್ಷಗಳಿಂದ ಜಿಲ್ಲೆಯ ಭೈರಾಪುರ, ಗುತ್ತಿ, ಮೂಲರಹಳ್ಳಿ, ಬೈದುವಳ್ಳಿ, ಬಿಳ್ಳೂರು, ಗೌಡಹಳ್ಳಿ, ದೇವರಮನೆ ಎಂಬಲ್ಲಿ ಮೊಕ್ಕಾಂ ಹೂಡಿದ್ದು, ಇವುಗಳ ಉಪಟಳದಿಂದ ಜನರು ರೋಸಿ ಹೋಗಿದ್ದಾರೆ.
ಮಳೆ ಆಯ್ತು, ಈಗ ಗಜರಾಜನ ಪ್ರವೇಶ: ಸಂಕಷ್ಟದಲ್ಲಿ ಕಾಫಿನಾಡಿನ ಜನತೆ - elephants destroying the crops
ಮಲೆನಾಡು ಭಾಗದಲ್ಲಿ ಸತತ ಎರಡು ವಾರಗಳ ಕಾಲ ಸುರಿದ ಮಳೆಯಿಂದ ಬೆವರು ಸುರಿಸಿ ಕಷ್ಟಪಟ್ಟು ಬೆಳೆದಿದ್ದ ಬೆಳೆ ಮಳೆ ಪಾಲಾಗಿದೆ. ಕೊನೆಪಕ್ಷ ಅಳಿದುಳಿದ ಫಸಲನ್ನಾದ್ರೂ ಕೊಯ್ಲು ಮಾಡೋಣ ಅಂದ್ರೆ ನಮಗೆ ಪಾಲು ಬೇಕು ಅಂತಾ ಆನೆಗಳ ಗುಂಪು ಊರೊಳಗೆ ರಾಜಾರೋಷವಾಗಿ ಎಂಟ್ರಿ ಕೊಡ್ತಿದೆ ಅಂತಾರೆ ಜನರು.
ಸಂಕಷ್ಟದಲ್ಲಿ ಕಾಫಿನಾಡಿನ ಜನತೆ
ಊರಿಗೆ ನುಗ್ಗಿ ಅಟ್ಟಹಾಸ ಮೆರೆಯುತ್ತಿರುವ ಕಾಡಾನೆಗಳು ಸುಮ್ಮನೆ ಹೋಗ್ತಿಲ್ಲ. ಸಿಕ್ಕಿದ್ದನ್ನೆಲ್ಲಾ ಹಾಳು ಮಾಡುತ್ತಿವೆ. ಕಾಡಾನೆಗಳ ಸಿಟ್ಟಿಗೆ ಕಾಫಿಗಿಡಗಳು, ಭತ್ತದ ಫಸಲು, ಕಾಂಪೌಂಡ್, ಅಡಿಕೆ ಮರ, ತೆಂಗಿನ ಮರ ಹೀಗೆ ಎಲ್ಲವೂ ಧ್ವಂಸವಾಗುತ್ತಿವೆ. ಕಷ್ಟಪಟ್ಟು ಬೆಳೆದ ಬೆಳೆಗಳು ಕಾಡಾನೆಗಳ ದಾಳಿಗೆ ತುತ್ತಾಗ್ತಿರೋದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.