ಕರ್ನಾಟಕ

karnataka

ETV Bharat / state

ಪಾದರಾಯನಪುರ: ಅಧಿಕಾರಿಗಳಿಗೆ ಸಹಕರಿಸದವರು ದೇಶ ದ್ರೋಹಿಗಳು- ಭೋಜೇಗೌಡ - Corona suspected of assault

ಕ್ವಾರಂಟೈನ್​ಗೆ ಕರೆದುಕೊಂಡು ಹೋಗಲು ಬಂದಿದ್ದ ಬಿಬಿಎಂಪಿ ಅಧಿಕಾರಿಗಳ ಮೇಲೆ ಕೊರೊನಾ ಶಂಕಿತರು ಹಲ್ಲೆ ನಡೆಸಿದ ಘಟನೆ ಭಾನುವಾರ ರಾತ್ರಿ ನಡೆಯಿತು. ಈ ಬಗ್ಗೆ ದೇಶಾದ್ಯಂತ ಜನರು ವಿರುದ್ಧ ವ್ಯಕ್ತಪಡಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಅಹ ತೀವ್ರವಾಗಿ ಖಂಡಿಸಿದ್ದಾರೆ.

S .L .Bhojegowda
ಎಸ್​​​​.ಎಲ್​​​​​​​.ಭೋಜೇಗೌಡ

By

Published : Apr 20, 2020, 6:11 PM IST

ಚಿಕ್ಕಮಗಳೂರು: ಕೊರೊನಾ ವೈರಸ್ ತಡೆಗಟ್ಟುವುದು ಸರ್ಕಾರದ ಕೆಲಸ ಮಾತ್ರವಲ್ಲ, ಪ್ರತಿಯೊಬ್ಬರ ಕರ್ತವ್ಯ ಎಂದು ವಿಧಾನ ಪರಿಷತ್ ಸದಸ್ಯ ಎಸ್​​​​.ಎಲ್​​​​​​​. ಭೋಜೇಗೌಡ ಹೇಳಿದರು.

ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಘಟನೆ ತಲೆತಗ್ಗಿಸುವ ವಿಚಾರ. ಅಲ್ಲಿ ಅಧಿಕಾರಿಗಳು ತಮ್ಮ ಕರ್ತವ್ಯ ಮಾಡಿದ್ದಾರೆ. ಅವರ ಕರ್ತವ್ಯಕ್ಕೆ ಯಾರೂ ಅಡ್ಡಿಪಡಿಬಾರದು. ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಕಿಡಿಗೇಡಿಗಳ ವಿರುದ್ದ ಮುಖ್ಯಮಂತ್ರಿ ಬಿ.ಎಸ್​​.ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್​​​​.ಎಲ್​​​​​​​.ಭೋಜೇಗೌಡ

ಸ್ಥಳಕ್ಕೆ ತೆರಳಿದ ಅಧಿಕಾರಿಗಳಿಗೆ ಸಹಕಾರ ನೀಡದೆ ಇರುವವರನ್ನು ದೇಶದ್ರೋಹಿಗಳು ಎಂದೂ ಕರೆಯಬೇಕು. ಎಂತಹ ಕಠಿಣ ಶಿಕ್ಷೆ ನೀಡಿದರೂ ಸಾಲದು. ಇದು ಸಮಾಜವೇ ತಲೆ ತಗ್ಗಿಸುವಂತಹ ವಿಚಾರ. ದಬ್ಬಾಳಿಕೆ ಮಾಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details