ಕರ್ನಾಟಕ

karnataka

ETV Bharat / state

ಸೂರ್ಯಗ್ರಹಣ ಆಚರಣೆಯಲ್ಲಿ ಒನಕೆ ಮೊರೆ ಹೋದ ಜನ - the eclipse customs

ಗ್ರಹಣ ಕಾಲದಲ್ಲಿ ಹಲವು ಕಡೆ ಹಲವಾರು ರೀತಿಯ ನಂಬಿಕೆಯನ್ನು ಹೊಂದಿರುವ ಸಾರ್ವಜನಿಕರು ತಮ್ಮ ವಿವಿಧ ಆಚರಣೆಗಳಲ್ಲಿ ತೊಡಗಿರುವದು ಕಂಡುಬಂದಿದೆ.

The eclipse
ಸೂರ್ಯಗ್ರಹಣ

By

Published : Dec 26, 2019, 7:11 PM IST

ಚಿಕ್ಕೋಡಿ/ಗದಗ/ಚಿಕ್ಕಮಗಳೂರು/ಅಥಣಿ/ಚಿತ್ರದುರ್ಗ: ಗ್ರಹಣ ಕಾಲದಲ್ಲಿ ಹಲವು ಕಡೆ ಹಲವಾರು ರೀತಿಯ ನಂಬಿಕೆಯನ್ನು ಹೊಂದಿರುವ ಸಾರ್ವಜನಿಕರು ತಮ್ಮ ವಿವಿಧ ಆಚರಣೆಗಳಲ್ಲಿ ತೊಡಗಿರುವದು ಕಂಡುಬಂದಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಅಥಣಿ, ರಾಯಭಾಗ ಸೇರಿದಂತೆ ಹಲವೆಡೆ 9:25 ರ ವೇಳೆಗೆ ಭಾಗಶಃ ಕಂಕಣ ಸೂರ್ಯಗ್ರಹಣ ಕಂಡು ಬಂದಿದ್ದು ವರ್ಷದ ಕೊನೆಯ ಗ್ರಹಣ ವೇಳೆಯಲ್ಲಿ ಹಲವೆಡೆ ದೇವಸ್ಥಾನದ ಗರ್ಭಗುಡಿಯ ಬಾಗಿಲು ಹಾಕಿದ್ದು ಕಂಡು ಬಂದಿದೆ.

ಚಿಕ್ಕೋಡಿ ಪಟ್ಟಣದ ದತ್ತ ಮಂದಿರದಲ್ಲಿ ಯಜ್ಞ-ಯಾಗ ಹೋಮ ಹವನಾಧಿಗಳನ್ನು ಮಾಡಲಾಗಿದ್ದು ರಾಯಭಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ಗ್ರಹಣದ ವೇಳೆಯೂ ಭಕ್ತರಿಗೆ ಮಾಯಕ್ಕ ದೇವಿಯ ದರ್ಶನಕ್ಕೆ ಅನುವು ಮಾಡಿಕೊಟ್ಟರೆ ಯಡೂರದ ವೀರಭದ್ರಶ್ವರ ದೇವಾಲಯ ಸೇರಿದಂತೆ ಹಲವೆಡೆ ಗರ್ಭಗುಡಿಯ ಬಾಗಿಲು ಹಾಕಿದ್ದು ಗ್ರಹಣದ ಬಳಿಕ ವಿಶೇಷ ಪೂಜೆ ಸಲ್ಲಿಸಲಾಗಿದೆ.ಇನ್ನೂ ವಿಜ್ಞಾನಕ್ಕೆ ಸವಾಲು ಎನ್ನುವಂತೆ ಖಾಲಿ ತಟ್ಟೆಯಲ್ಲಿ ನೀರು ಹಾಕಿ ಕಟ್ಟಿಗೆಯ ಒಣಕೆ ಇರಿಸಿದಾಗ ಯಾವುದೇ ಗುರುತ್ವಾಕರ್ಷಣೆ ಇಲ್ಲದೆ ತಟ್ಟೆಯಲ್ಲಿ ಒನಕೆಗಳು ಆಧಾರವಿಲ್ಲದೇ ನಿಂತಿರುವ ದೃಶ್ಯಗಳು ಕೂಡ ಸದ್ಯ ವೈರಲ್ ಆಗಿವೆ.

ಸೂರ್ಯಗ್ರಹಣ ಆಚರಣೆಯಲ್ಲಿ ಒನಕೆ ಮೊರೆ ಹೋದ ಜನ

ಗದಗ ಜಿಲ್ಲೆಯ ಮಲ್ಲಸಮುದ್ರ ಗ್ರಾಮದಲ್ಲಿ ಇನ್ನೂ ಹಳೆಯ ಕಾಲದ ಪದ್ಧತಿ ರೂಢಿಯಲ್ಲಿದ್ದು, ಒನಕೆಯಿಂದ ಗ್ರಹಣದ ಖಾತರಿಪಡಿಸಿಕೊಂಡಿರುವ ಘಟನೆ ನಡೆದಿದೆ. ಅಗಲವಾದ ಪಾತ್ರೆಯೊಂದರಲ್ಲಿ ಒನಕೆಯನ್ನ ಇಟ್ಟು ಅದು ಪಾತ್ರೆಯಲ್ಲಿ ನಿಂತರೆ ಗ್ರಹಣ ಹಿಡಿದಿದೆ ಎಂದರ್ಥವಂತೆ. ಆ ಕ್ಷಣಕ್ಕೆ ಒನಕೆ ಪಾತ್ರೆಯಲ್ಲಿ ಸುಮಾರು ಗಂಟೆಯವರೆಗೆ ನಿಂತು ಅಚ್ಚರಿ ಮೂಡಿಸಿತ್ತು. ಬಳಿಕ ಈ ಕುತೂಹಲ ಕುರಿತು ಶಿಕ್ಷಕರು ಮಕಕ್ಕಳಿಗೆ ಮತ್ತು ನೆರೆದ ಜನಕ್ಕೆ ವೈಜ್ಞಾನಿಕ ಕಾರಣ ವಿವರಿಸಿ ತಿಳಿ ಹೇಳಿದರು.

ಚಿಕ್ಕಮಗಳೂರು ತಾಲೂಕಿನ ಕೆಲವು ಭಾಗದಲ್ಲಿ ಮಲೆನಾಡಿನ ಜನರು ಒನಕೆ ಮೂಲಕ ಸೂರ್ಯ ಗ್ರಹಣದ ಪ್ರಾರಂಭ ಹಾಗೂ ಅದರ ತೀವ್ರತೆಯನ್ನು ನೋಡಿದ್ದಾರೆ. ನಗರದ ಹೊರವಲಯದಲ್ಲಿರುವ ಮೂಗ್ತಿಹಳ್ಳಿ ಬಳಿಯ ಶಿರಗುಂದ ಗ್ರಾಮದಲ್ಲಿ ಉಮೇಶ್ ಎಂಬುವರ ಮನೆಯ ಬಳಿ ದೇವಮ್ಮ ಎಂಬ ಮಹಿಳೆ ಈ ಒನಕೆಯನ್ನು ನಿಲ್ಲಿಸಿದ್ದರು. ಇಲ್ಲಿ ಒನಕೆಯ ಮೂಲಕ ಸೂರ್ಯ ಗ್ರಹಣದ ಲೆಕ್ಕಾಚಾರ ಹಾಕಲಾಗಿದೆ.

ಇನ್ನು ಅಥಣಿ ಜನರೂ ಸಹ ಒನಕೆ ಬಳಸಿ ಗ್ರಹಣ ಸ್ಪರ್ಶ ಮೋಕ್ಷ ಹೊಂದಿದೆಯಾ ಅಥವಾ ಇಲ್ಲವೋ ಎಂದು ಒನಕೆ ಮೋರೆ ಹೋಗಿದ್ದಾರೆ. ಒಂದು ಪಾತ್ರೆಯಲ್ಲಿ ನೀರು ತುಂಬಿ ಸರಿ ಸುಮಾರು 4ಇಂಚಿನಷ್ಟು ನೀರನ್ನು ಪಾತ್ರೆಯಲ್ಲಿ ಹಾಕಿ ಅದರಲ್ಲಿ ಒನಕೆ ಇಡುತ್ತಾರೆ ಒನಕೆ ಗ್ರಹಣ ಕಾಲದಲ್ಲಿ ನೀರಿನಲ್ಲಿ ನಿಲ್ಲುತ್ತದೆ, ಸಾಮಾನ್ಯವಾಗಿ ಗ್ರಹಣ ಇಲ್ಲದ ಸಮಯದಲ್ಲಿ ನೀರಲ್ಲಿ ಒನಕೆ ನಿಲ್ಲುವುದಿಲ್ಲ, ಗ್ರಹಣ ಮೋಕ್ಷ ಹೊಂದಿದ ಕೂಡಲೇ ಒನಕೆ ತಾನಾಗಿಯೇ ಕೆಳಗೆ ಬೀಳುತ್ತದೆ. ಇದರಿಂದ ನಿಖರವಾಗಿ ಗ್ರಹಣ ಮೋಕ್ಷ ಹೊಂದಿದೆ ಎಂದು ಜನರು ಸ್ನಾನ ಮಾಡುವುದು, ಮನೆ ಮಠ ದೇವಸ್ಥಾನಗಳನ್ನು ತೊಳೆದು ಪೂಜೆ ಸಲ್ಲಿಸುವುದು ಈ ಭಾಗದಲ್ಲಿ ವಿಶೇಷ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದ ಕಾಟಪ್ಪನಹಟ್ಟಿ ಸಮೀಪದ ಗೊಲ್ಲರಹಟ್ಟಿಯಲ್ಲಿ ತಟ್ಟೆಯಲ್ಲಿ ಒನಕೆ ನಿಲ್ಲಿಸಿ ವಿಭಿನ್ನವಾಗಿ ಜನ್ರು ಗ್ರಹಣ ವೀಕ್ಷಣೆ ಮಾಡಿದ್ದಾರೆ. ಗೊಲ್ಲರಹಟ್ಟಿಯ ನಿವಾಸಿ ಪೂಜಾರಿ ಕರಿಯಣ್ಣ ಎಂಬುವರ ಮನೆ ಬಳಿ ಒನಕೆ ನಿಲ್ಲಿಸಿ ಸಾರ್ವಜನಿಕಕರು ಗ್ರಹಣ ವೀಕ್ಷಣೆ ಮಾಡಿದ್ದು, ಗ್ರಹಣದ ವೇಳೆ ಯಾವುದೇ ಆಧಾರವಿಲ್ಲದೇ ಒನಕೆ ನಿಲ್ಲುವ ನಂಬಿಕೆಯನ್ನು ಸ್ಥಳೀಯರಲ್ಲಿ ಕಾಣಬಹುದಾಗಿದೆ. ಇನ್ನೂ ತಟ್ಟೆಯಲ್ಲಿ ನೀರು ಹಾಕುವ ಮೂಲಕ ಒನಕೆಯನ್ನು ನಿಲ್ಲಿಸಿ ಗ್ರಹಣ ವೀಕ್ಷಣೆ ಮಾಡಿರುವುದು ಈ ಗೊಲ್ಲರಹಟ್ಟಿ ಜನ್ರ ಪ್ರತೀಥಿಯಾಗಿದೆಯಂತೆ‌.

ABOUT THE AUTHOR

...view details