ಕರ್ನಾಟಕ

karnataka

ETV Bharat / state

ಕರ್ತವ್ಯ ನಿರತ ಕಾನ್ಸ್​ಟೇಬಲ್​​‌ ಮೇಲೆ ಹಲ್ಲೆ: ಆರೋಪಿಗಳಿಗೆ ದಂಡ ವಿಧಿಸಿದ ನ್ಯಾಯಾಲಯ - ಚಿಕ್ಕಮಗಳೂರಿನಲ್ಲಿ ಕಾನ್‌ಸ್ಟೇಬಲ್‌ ಮೇಲೆ ಹಲ್ಲೆ ಪ್ರಕರಣ

ಹೆಡ್‌ ಕಾನ್‌ಸ್ಟೇಬಲ್‌ ಮೇಲೆ ಹಲ್ಲೆ ನಡೆಸಿದ ಆರೋಪಿಗಳಿಗೆ ನ್ಯಾಯಾಲಯ ದಂಡ ವಿಧಿಸಿದ್ದು, ದಂಡ ಪಾವತಿಸಲು ತಪ್ಪಿದಲ್ಲಿ ಎರಡೂವರೆ ತಿಂಗಳು ಜೈಲು ಶಿಕ್ಷೆ ಅನುಭವಿಸುವಂತೆ ಸೂಚಿಸಿದೆ.

The court that fined the accused, who attacks on constable
ಕಾನ್‌ಸ್ಟೇಬಲ್‌ ಮೇಲೆ ಹಲ್ಲೆ ನಡೆಸಿದ ಆರೋಪಿಗಳಿಗೆ ದಂಡ

By

Published : Feb 17, 2021, 5:25 PM IST

ಚಿಕ್ಕಮಗಳೂರು :ಕರ್ತವ್ಯ ನಿರತ ಪೊಲೀಸ್ ಹೆಡ್‌ ಕಾನ್‌ಸ್ಟೇಬಲ್‌ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ನ್ಯಾಯಾಲಯ ದಂಡ ವಿಧಿಸಿದೆ.

ಎನ್​.ಆರ್.​ ಪುರ ತಾಲೂಕಿನ ಮುತ್ತಿನಕೊಪ್ಪದ ಎಂ.ಎನ್ ಸುಮಂತ್, ಸಂತೋಷ್, ಶಾಂತಿ ಪ್ರಮೋದ್‌ಗೆ ತಲಾ 10 ಸಾವಿರ ರೂ. ದಂಡ ವಿಧಿಸಿ ಎನ್‌. ಆರ್‌ ಪುರ ಜೆಎಂಎಫ್‌ಸಿ ಕೋರ್ಟ್‌ ಆದೇಶಿಸಿದೆ. ದಂಡ ಪಾವತಿಸಲು ತಪ್ಪಿದಲ್ಲಿ ಎರಡೂವರೆ ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು ಸೂಚಿಸಿದೆ.

ಓದಿ : ಚಿಕ್ಕಮಗಳೂರು: ಸಹಕಾರ ಸಾರಿಗೆ ಬಸ್ ಚಾಲಕ ಆತ್ಮಹತ್ಯೆ

ಎನ್ ಆರ್ ಪುರ ತಾಲೂಕಿನ ಮುತ್ತಿನಕೊಪ್ಪದ ಕೀರ್ತಿ ಬಾರ್ ಮತ್ತು ರೆಸ್ಟೋರೆಂಟ್​​‌ನ ಮುಂಭಾಗದಲ್ಲಿ 2017 ಜುಲೈ 1 ರಂದು ಸುಮಂತ್, ಸಂತೋಷ್, ಪ್ರಮೋದ್‌, ಬ್ಯಾಗ್‌ನಲ್ಲಿ ಮದ್ಯ ಬಾಟಲಿ ಇಟ್ಟುಕೊಂಡು ಬೈಕ್​ ಮೂಲಕ ಮಾರಾಟದಲ್ಲಿ ತೊಡಗಿದ್ದರು. ಅದನ್ನು ಪ್ರಶ್ನಿಸಿದ ಹೆಡ್‌ ಕಾನ್‌ಸ್ಟೇಬಲ್​‌ ಈಶ್ವರಪ್ಪ ಮೇಲೆ ಮೂವರೂ ಹಲ್ಲೆ ನಡೆಸಿದ್ದರು. ಈ ಸಂಬಂಧ ಎನ್‌.ಆರ್‌ ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ABOUT THE AUTHOR

...view details