ಕರ್ನಾಟಕ

karnataka

ETV Bharat / state

ಮದುವೆ ದಿನದಂದು ಸಿದ್ಧಾರ್ಥ್​ ಹೆಗ್ಡೆಗೆ ನುಡಿನಮನ ಸಲ್ಲಿಸಿದ ಮದುಮಗ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ನಿಡ್ನಳ್ಳಿ ಸಮೀಪದ ಹೊಳೆ ಕೂಡಿಗೆಯ ಸಂತೋಷ್ ಎಂಬುವರು ತಮ್ಮ ಮದುವೆಯ ದಿನ ಕಾಫಿದೊರೆ ಸಿದ್ಧಾರ್ಥ್​ ಹೆಗ್ಡೆ ಅವರಿಗೆ ನುಡಿನಮನ ಸಲ್ಲಿಸಿದರು.

Siddharth Hegde
ಸಿದ್ದಾರ್ಥ ಹೆಗ್ಗಡೆಗೆ ನುಡಿನಮನ ಸಲ್ಲಿಸಿದ ಮದುಮಗ ಸಂತೋಷ್

By

Published : Jan 26, 2022, 10:21 AM IST

Updated : Jan 26, 2022, 11:01 AM IST

ಚಿಕ್ಕಮಗಳೂರು: ಉದ್ಯೋಗ ನೀಡಿ ಉತ್ತಮ ಬದುಕು ಕಟ್ಟಿಕೊಳ್ಳಲು ಕಾರಣರಾದ ಸಿದ್ಧಾರ್ಥ್​​ ಹೆಗ್ಡೆ ಅವರನ್ನು ಯುವಕನೊಬ್ಬ ತನ್ನ ಮದುವೆಯ ದಿನ ವೇದಿಕೆಯಲ್ಲಿ ನೆನಪಿಸಿಕೊಂಡು ಅವರಿಗೆ ನುಡಿನಮನ ಸಲ್ಲಿಸಿದ್ದಾನೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ನಿಡ್ನಳ್ಳಿ ಸಮೀಪದ ಹೊಳೆ ಕೂಡಿಗೆಯ ಸಂತೋಷ್ ಎಂಬುವರು ಬಾಳೆಹೊನ್ನೂರು ಗಡಿಗೇಶ್ವರದ ಪ್ರಮೀತಾ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ವಿವಾಹದ ಹಿನ್ನೆಲೆಯಲ್ಲಿ ಮದುಮಗ ಸಂತೋಷ್ ಅವರ ಮನೆ ಹೊಳೆ ಕೂಡಿಗೆಯಲ್ಲಿ ಮೆಹಂದಿ ಶಾಸ್ತ್ರ ನಡೆದಿದ್ದು, ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸಿದ್ಧಾರ್ಥ್​ ಹೆಗ್ಡೆ ಅವರ ಭಾವಚಿತ್ರವನ್ನಿಟ್ಟು ಪುಷ್ಪ ನಮನ ಹಾಗೂ ನುಡಿ ನಮನ ಸಲ್ಲಿಸಲಾಯಿತು.

ಸಿದ್ಧಾರ್ಥ್​ ಹೆಗ್ಡೆಗೆ ನುಡಿನಮನ ಸಲ್ಲಿಸಿದ ಮದುಮಗ ಸಂತೋಷ್

ಈ ವೇಳೆ ಅಭಿಪ್ರಾಯ ಹಂಚಿಕೊಂಡ ಮದುಮಗ ಸಂತೋಷ್, ಬಡ ಕುಟುಂಬದಿಂದ ಬಂದ ನನಗೆ ಸಿದ್ಧಾರ್ಥ್​ ಹೆಗ್ಡೆ ಅವರು ತಮ್ಮ ಸಂಸ್ಥೆಯಲ್ಲಿ ಉದ್ಯೋಗ ಕೊಟ್ಟ ಕಾರಣ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಯಿತು. ಹೀಗಾಗಿ, ಸಿದ್ಧಾರ್ಥ್​ ಹೆಗ್ಡೆ ಅವರ ಭಾವಚಿತ್ರವನ್ನಿಟ್ಟು ಪುಷ್ಪ ನಮನ ಹಾಗೂ ನುಡಿ ನಮನ ಸಲ್ಲಿಸಲಾಯಿತು ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸಂಜಯಗೌಡ, ಪರೀಕ್ಷಿತ್ ಗೌಡ ಮುಂತಾದವರು ಕಾರ್ಯಕ್ರಮಕ್ಕೆ ಆಗಮಿಸಿ, ಸಿದ್ಧಾರ್ಥ್​​ ಹೆಗ್ಡೆ ಅವರ ಭಾವಚಿತ್ರಕ್ಕೆ ಗೌರವ, ನುಡಿನಮನ ಸಲ್ಲಿಸಿದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 26, 2022, 11:01 AM IST

ABOUT THE AUTHOR

...view details