ಕರ್ನಾಟಕ

karnataka

ETV Bharat / state

ಕೊರೊನಾ ತಡೆಗಟ್ಟಲು ಸ್ವಯಂ ಪ್ರೇರಿತವಾಗಿ ಅಂಗಡಿ ಮುಚ್ಚಲು ಕ್ಷೌರಿಕರ ನಿರ್ಧಾರ - close the store with self-motivation

ಚಿಕ್ಕಮಗಳೂರಿನ ಎನ್.​ಆರ್.ಪುರ ತಾಲೂಕಿನಲ್ಲಿ ಮೂರು ಜನರಿಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆ ಬಾಳೆಹೊನ್ನೂರಿನ ಎಲ್ಲಾ ಕ್ಷೌರಿಕ ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚಲು ಕ್ಷೌರಿಕರು ತಿರ್ಮಾನ ತೆಗೆದುಕೊಂಡಿದ್ದಾರೆ.

ಕ್ಷೌರಿಕರ ನಿರ್ಧಾರ
ಕ್ಷೌರಿಕರ ನಿರ್ಧಾರ

By

Published : May 22, 2020, 4:48 PM IST

ಚಿಕ್ಕಮಗಳೂರು: ಜಿಲ್ಲೆಯ ಎನ್.​ಆರ್.ಪುರ ತಾಲೂಕಿನಲ್ಲಿ ಮೂರು ಜನರಿಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆ ಬಾಳೆಹೊನ್ನೂರಿನ ಎಲ್ಲಾ ಕ್ಷೌರಿಕ ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚಲು ಕ್ಷೌರಿಕರು ತಿರ್ಮಾನ ತೆಗೆದುಕೊಂಡಿದ್ದಾರೆ.

ಅಂಗಡಿ ಮುಚ್ಚಲು ಕ್ಷೌರಿಕರ ನಿರ್ಧಾರಿಸಿ ಸಹಿ ಹಾಕಿರು ಪತ್ರ
ಸ್ವಯಂ ಪ್ರೇರಿತವಾಗಿ ಅಂಗಡಿ ಮುಚ್ಚಲು ಕ್ಷೌರಿಕರ ನಿರ್ಧಾರ

ಜಿಲ್ಲೆಯ ಎನ್.​ಆರ್.ಪುರ ತಾಲೂಕಿನಲ್ಲಿ ಮೂರು ಜನರಿಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆ ಬಾಳೆಹೊನ್ನೂರಿನ ಸವಿತಾ ಸಮಾಜದ ಕ್ಷೌರಿಕರು ಈ ತಿರ್ಮಾನ ತೆಗೆದುಕೊಂಡಿದ್ದಾರೆ. ಗುರುವಾರದಿಂದ ಮುಂದಿನ ತಿಂಗಳು 3ನೇ ತಾರೀಖಿನವರೆಗೂ ಎಲ್ಲಾ ಕ್ಷೌರಿಕ ಅಂಗಡಿಗಳು ಸ್ವಯಂ ಪ್ರೇರಿತವಾಗಿ ಮುಚ್ಚಲಾಗುವುದು ಎಂದು ತಿಳಿಸಿದ್ದಾರೆ.

ಎಲ್ಲಾ ಸದಸ್ಯರು ಸರ್ವಾನುಮತದಿಂದ ಈ ಮಹತ್ವದ ನಿರ್ಧಾರಕ್ಕೆ ಬಂದಿದ್ದು, ಒಟ್ಟು 14 ದಿನಗಳ ಕಾಲ ತಮ್ಮ ಕ್ಷೌರಿಕ ಅಂಗಡಿಗಳನ್ನು ಸ್ವಯಂ ಪ್ರೇರಿತರಾಗಿ ಮುಚ್ಚಲು ತಿರ್ಮಾನ ತೆಗೆದುಕೊಂಡಿದ್ದಾರೆ.

ABOUT THE AUTHOR

...view details