ಚಿಕ್ಕಮಗಳೂರು :-ಶ್ರೀ ಗುರು ರೇವಣ ಸಿದ್ದೇಶ್ವರ ದೇವಸ್ಥಾನ ಕಮಿಟಿಯ ಹಣ ದುರುಪಯೋಗ ಆರೋಪ ಕೇಳಿ ಬಂದಿರುವ ಹಿನ್ನೆಲೆ, ಕನಕ ಜಯಂತಿ ಕಾರ್ಯಕ್ರಮಕ್ಕೆ ತೆರಳಿದ ಮಾಜಿ ಶಾಸಕ ಶ್ರೀನಿವಾಸ್ ಗೆ ಘೇರಾವ್ ಹಾಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗದಂತೆ ತರೀಕೆರೆ ಮಾಜಿ ಶಾಸಕನಿಗೆ ಜನರಿಂದ ಧಿಕ್ಕಾರ ಕೂಗಿದ್ದು, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ಈ ಘಟನೆ ನಡೆದಿದೆ.
ಹಣ ದುರುಪಯೋಗದ ಆರೋಪ ಹಿನ್ನೆಲೆ, ಮಾಜಿ ಶಾಸಕನಿಗೆ ಘೇರಾವ್ ಹಾಕಿದ ಜನರು - ಕನಕ ಜಯಂತಿ ಕಾರ್ಯಕ್ರಮ
ರೇವಣ ಸಿದ್ದೇಶ್ವರರಿಗೆ ಕುರುಬ ಸಮಾಜದ ಮುಖಂಡರಿಂದ ವಿರೋಧ ವ್ಯಕ್ತವಾಗಿದ್ದು, ಮೆರವಣಿಗೆಯ ಟ್ರ್ಯಾಕ್ಟರ್ ಏರದಂತೆ, ಧ್ವಜಾರೋಹಣ ಮಾಡದಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಣ ದುರುಪಯೋಗದ ಆರೋಪ ಹಿನ್ನೆಲೆ, ಮಾಜಿ ಶಾಸಕನಿಗೆ ಘೇರಾವ್ ಹಾಕಿದ ಜನರು
ರೇವಣ ಸಿದ್ದೇಶ್ವರರಿಗೆ ಕುರುಬ ಸಮಾಜದ ಮುಖಂಡರಿಂದ ವಿರೋಧ ವ್ಯಕ್ತವಾಗಿದ್ದು, ಮೆರವಣಿಗೆಯ ಟ್ರ್ಯಾಕ್ಟರ್ ಏರದಂತೆ, ಧ್ವಜಾರೋಹಣ ಮಾಡದಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಜನರು ಮಾಜಿ ಶಾಸಕ ಶ್ರೀ ನಿವಾಸರನ್ನು ಲೆಕ್ಕಿಸದೇ ಕಾರ್ಯಕ್ರಮ ಮುಂದುವರೆಸಿದ ಘಟನೆಯು ನಡೆಯಿತು.
ಇದನ್ನೂ ಓದಿ:ಚಿಕ್ಕಮಗಳೂರು: ಎಲೆಚುಕ್ಕಿ ರೋಗಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ರೈತ