ಕರ್ನಾಟಕ

karnataka

ETV Bharat / state

ನಮ್ಮನ್ನು ಬದುಕಿಸಿದ ನೀವು, ಬದುಕಿನುದ್ದಕ್ಕೂ ಚೆನ್ನಾಗಿರಿ.. ಅಕ್ಕ-ತಂಗಿಯರಿಂದ ವೀರರಿಗೆ ಕಣ್ಣೀರಿನ ಬೀಳ್ಕೊಡುಗೆ! - ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿ

ನೆರೆ ಪರಿಹಾರ ಕಾರ್ಯದಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ಲಾ ಯೋಧರು ಇಂದು ಬೆಂಗಳೂರಿನ ಕಡೆ ಪ್ರಯಾಣ ಬೆಳೆಸಿದರು. ಜೀವ ಉಳಿಸಿದ ಯೋಧರಿಗೆ ಕಣ್ಣೀರಿನ ವಿದಾಯ ಹೇಳಿದ ಮೂಡಿಗೆರೆಯ ಜನ, ಪ್ರಾಣ ಉಳಿಸಿದ ಯೊಧರಿಗೆ ರಾಖಿ ಕಟ್ಟಿ ಸಹೋದರನ ಸ್ಥಾನ ನೀಡಿದರು.

ಪ್ರಾಣ ಉಳಿಸಿದ ಯೊಧರಿಗೆ ರಾಖಿ ಕಟ್ಟಿ ಸಹೋದರನ ಸ್ಥಾನ ನೀಡಿದ ಹೆಂಗಳೆಯರು.

By

Published : Aug 13, 2019, 12:55 PM IST

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಪ್ರವಾಹ ಉಂಟಾಗಿ ಸಂಕಷ್ಟಕ್ಕೆ ಸಿಲುಕ್ಕಿದ್ದ ಜನರನ್ನು ರಕ್ಷಣೆ ಮಾಡಿದ ಯೋಧರನ್ನು ಮೂಡಿಗೆರೆ ಜನರು ಇಂದು ಬಿಳ್ಕೊಟ್ಟರು.

ಪ್ರಾಣ ಉಳಿಸಿದ ಯೊಧರಿಗೆ ರಾಖಿ ಕಟ್ಟಿ ಸಹೋದರನ ಸ್ಥಾನ ನೀಡಿದ ಹೆಂಗಳೆಯರು..

ನೆರೆ ಪರಿಹಾರ ಕಾರ್ಯದಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ಲಾ ಯೋಧರು ಇಂದು ಬೆಂಗಳೂರಿನ ಕಡೆ ಪ್ರಯಾಣ ಪ್ರಯಾಣ ಬೆಳೆಸಿದರು. ಜೀವ ಉಳಿಸಿದ ಯೋಧರಿಗೆ ಕಣ್ಣೀರಿನಿಂದಲೇ ವಿದಾಯ ಹೇಳಿದ ಮೂಡಿಗೆರೆಯ ಜನ, ಪ್ರಾಣ ಉಳಿಸಿದ ಯೊಧರಿಗೆ ರಾಖಿ ಕಟ್ಟಿ ಸಹೋದರನ ಸ್ಥಾನ ನೀಡಿದರು.

ತಮಗಾಗಿ ಇದ್ದಂತಹ ಹಣ್ಣು, ಬಿಸ್ಕೇಟ್​ಗಳನ್ನು ಸಂತ್ರಸ್ತರಿಗೆ ಹಂಚಿದ ಸೈನಿಕರು ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾದರು. ಇದೇ ಸಂದರ್ಭದಲ್ಲಿ ಭಾರತ್ ಮಾತಕೀ ಜೈ ಎಂದು ಘೋಷಣೆ ಕೂಗಿದ ಜನರಿಗೆ, ನೀವು ಯಾವಾಗ ಕರೆದರೂ ನಿಮ್ಮ ಸೇವೆಗೆ ಸಿದ್ಧ ಎಂಬ ಪ್ರತಿಕ್ರಿಯೆಯನ್ನು ಸೈನಿಕರು ನೀಡಿದರು.

ABOUT THE AUTHOR

...view details