ಚಿಕ್ಕಮಗಳೂರು: ತರೀಕೆರೆ ಶಾಸಕ ಸುರೇಶ್ ಕೋವಿಡ್ ಸೋಂಕಿತ ಬಾಲಕಿಯೊಂದಿಗೆ ಡಾನ್ಸ್ ಮಾಡುವ ಮೂಲಕ ರೋಗಿಗಳಲ್ಲಿ ಆತ್ಮಸ್ಥೈರ್ಯ ತುಂಬಿದ್ದಾರೆ. ಜಿಲ್ಲೆಯ ತರೀಕೆರೆ ತಾಲೂಕಿನ ಬಾವಿಕೆರೆ ಕೋವಿಡ್ ಕೇರ್ ಸೆಂಟರ್ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ಶಾಸಕ ಸುರೇಶ್ ರೋಗಿಗಳೊಂದಿಗೆ ನೃತ್ಯ ಮಾಡಿ ರಂಜಿಸಿದ್ದಾರೆ. ಜೊತೆಗೆ 'ಕಾಲ ಮತ್ತೊಮ್ಮೆ ನಮಗಾಗಿ ಬಂತು' ಮತ್ತು 'ಯಾರೇ ನೀನು ರೋಜಾ ಹೂವೇ' ಹಾಡನ್ನು ಸ್ವತಃ ಹಾಡಿ ನೃತ್ಯ ಮಾಡಿದರು.
ಕೋವಿಡ್ ಸೋಂಕಿತ ಬಾಲಕಿಯೊಂದಿಗೆ ಹೆಜ್ಜೆ ಹಾಕಿದ ತರೀಕೆರೆ ಶಾಸಕ - Tarikere MLA Suresh dance
ತರೀಕೆರೆ ತಾಲೂಕಿನ ಬಾವಿಕೆರೆ ಕೋವಿಡ್ ಕೇರ್ ಸೆಂಟರ್ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ಶಾಸಕ ಸುರೇಶ್ ರೋಗಿಗಳೊಂದಿಗೆ ನೃತ್ಯ ಮಾಡಿ ರಂಜಿಸಿದ್ದಾರೆ.
ಕೋವಿಡ್ ಸೋಂಕಿತ ಬಾಲಕಿಯೊಂದಿಗೆ ಹೆಜ್ಜೆ ಹಾಕಿದ ತರೀಕೆರೆ ಶಾಸಕ
ಈ ವೇಳೆ ಸೋಂಕಿತ ಬಾಲಕಿಯೊಬ್ಬಳು ಶಾಸಕರ ಜೊತೆಗೆ ಹೆಜ್ಜೆ ಹಾಕಿದಳು. ಶಾಸಕರಿಗೆ ತಾಲೂಕು ಮಟ್ಟದ ಅಧಿಕಾರಿಗಳು ಸಾಥ್ ನೀಡಿದ್ದಾರೆ.
ಇದನ್ನೂ ಓದಿ:ರಮೇಶ್ ಜಾರಕಿಹೊಳಿ ಸಿಡಿ ಕೇಸ್: ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾದ ಆರೋಪಿಗಳು