ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಕಾಡುಕೋಣದ ದಾಳಿ ಮಿತಿ ಮೀರಿ ಹೋಗಿದ್ದು, ಅಡಿಕೆ ತೋಟದಲ್ಲಿ ನಿರಂತರವಾಗಿ ದಾಳಿ ನಡೆಸುತ್ತಿವೆ.
ಕಾಡುಕೋಣಗಳ ನಿರಂತರ ದಾಳಿ: ಲಕ್ಷಾಂತರ ಮೌಲ್ಯದ ಅಡಿಕೆ, ಬಾಳೆ ನಾಶ - undefined
ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ಕಳೆದ ಒಂದು ತಿಂಗಳಿಂದ ಕಾಡುಕೋಣದ ನಿರಂತರ ದಾಳಿ. ಲಕ್ಷಾಂತರ ಮೌಲ್ಯದ ಅಡಿಕೆ ಮರ ಹಾಗೂ ಬಾಳೆ ನಾಶ. ಶಾಶ್ವತ ಪರಿಹಾರಕ್ಕೆ ತೋಟದ ಮಾಲೀಕರು, ಸ್ಥಳೀಯರು ಮನವಿ.
![ಕಾಡುಕೋಣಗಳ ನಿರಂತರ ದಾಳಿ: ಲಕ್ಷಾಂತರ ಮೌಲ್ಯದ ಅಡಿಕೆ, ಬಾಳೆ ನಾಶ](https://etvbharatimages.akamaized.net/etvbharat/images/768-512-2935134-thumbnail-3x2-ckm.jpg)
ಕಾಡುಕೋಣದ ದಾಳಿ
ಜಿಲ್ಲೆಯ ತರೀಕೆರೆ ತಾಲೂಕಿನ ರಾಮನಹಳ್ಳಿ ಗ್ರಾಮದಲ್ಲಿ ಕಾಡುಕೋಣಗಳ ದಾಳಿ ನಿರಂತರವಾಗಿ ನಡೆಯುತ್ತಿದ್ದು, ಲಕ್ಷಾಂತರ ಮೌಲ್ಯದ ಅಡಿಕೆ ಮರ ಹಾಗೂ ಬಾಳೆ ನಾಶವಾಗಿದೆ.
ತೋಟದ ಮಾಲೀಕರು ಹಾಗೂ ಸ್ಥಳೀಯರು ತರೀಕೆರೆ ಅರಣ್ಯ ಇಲಾಖೆಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅರಣ್ಯ ಇಲಾಖೆಯ ವಿರುದ್ದ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಹುಡುಕುವಂತೆ ಮನವಿ ಮಾಡುತ್ತಿದ್ದಾರೆ.