ಚಿಕ್ಕಮಗಳೂರು :ಭದ್ರಾ ನಾಲೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಹಸುವಿನ ರಕ್ಷಣೆಯನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ಮಾಡಿರುವ ಘಟನೆ ತರೀಕೆರೆ ತಾಲೂಕಿನ ಸಮತಳ ಬಳಿ ನಡೆದಿದೆ.
ಭದ್ರಾ ನಾಲೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಹಸುವಿನ ರಕ್ಷಣೆ..
ಮೊದಲ ಬಾರಿ ಜೆಸಿಬಿಯಲ್ಲಿ ಎಳೆಯುವ ಪ್ರಯತ್ನವೂ ವಿಫಲವಾಗಿತ್ತು. ವೇಗವಾಗಿ ಹರಿಯುವ ನೀರಿನಲ್ಲಿ ಹಸುವನ್ನು ರಕ್ಷಣೆ ಮಾಡಲಾಗದೇ ಸಾವನ್ನಪ್ಪಿತ್ತು. ಆದರೆ, ಇಂದು ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಹಸುವಿನ ರಕ್ಷಣೆ ಮಾಡಲಾಗಿದೆ..
ಭದ್ರಾ ಮೇಲ್ದಂಡೆ ಯೋಜನೆಯ ನಾಲೆಯಲ್ಲಿ ಈ ಘಟನೆ ನಡೆದಿದ್ದು, ಇಲಾಖೆಯ ಸಮವಸ್ತ್ರದಲ್ಲೇ ನಾಲೆಗಿಳಿದು ಹಸುವನ್ನು ಅಗ್ನಿ ಶಾಮಕದಳದ ಸಿಬ್ಬಂದಿ ಹಗ್ಗದ ಮೂಲಕ ರಕ್ಷಣೆ ಮಾಡಿದ್ದಾರೆ. ಇದೇ ಭಾಗದಲ್ಲಿ ಕಳೆದ ಮೂರು ದಿನದ ಹಿಂದೆಯೂ ನಾಲೆಯಲ್ಲಿ ಹಸು ಬಿದ್ದು ಸಾವನ್ನಪ್ಪಿತ್ತು.
ಮೊದಲ ಬಾರಿ ಜೆಸಿಬಿಯಲ್ಲಿ ಎಳೆಯುವ ಪ್ರಯತ್ನವೂ ವಿಫಲವಾಗಿತ್ತು. ವೇಗವಾಗಿ ಹರಿಯುವ ನೀರಿನಲ್ಲಿ ಹಸುವನ್ನು ರಕ್ಷಣೆ ಮಾಡಲಾಗದೇ ಸಾವನ್ನಪ್ಪಿತ್ತು. ಆದರೆ, ಇಂದು ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಹಸುವಿನ ರಕ್ಷಣೆ ಮಾಡಲಾಗಿದ್ದು, ನಾಲೆಯ ಎರಡೂ ಬದಿಯೂ ಬೇಲಿ ನಿರ್ಮಿಸುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.