ಚಿಕ್ಕಮಗಳೂರು: ಉಪ ಚುನಾವಣೆ ಮೇಲೆ ಸುಪ್ರೀಂಕೋರ್ಟ್ನ ತೀರ್ಪು ಪರಿಣಾಮ ಬೀರಲಿದೆ ಎಂದು ಸಚಿವ ಸಿ ಟಿ ರವಿ ಅಭಿಪ್ರಾಯಪಟ್ಟಿದ್ದಾರೆ.
ಉಪ ಚುನಾವಣೆಗೆ ಸುಪ್ರೀಂ ತೀರ್ಪು ಪರಿಣಾಮ ಬೀರಲಿದೆ: ಸಿ ಟಿ ರವಿ - CT Ravi
ಉಪ ಚುನಾವಣೆಗೆ ಕೆಲವೊಂದು ತಾಂತ್ರಿಕ ತೊಡಕುಗಳಿದ್ದು, ಹಿಂದಿನ ಸಭಾಧ್ಯಕ್ಷ ರಮೇಶ್ ಕುಮಾರ್ ಅವರ ತೀರ್ಪಿನ ಮೇಲೆ ಅನರ್ಹ ಶಾಸಕರು ಸುಪ್ರೀಂ ಕೋರ್ಟ್ಗೆ ಹೋಗಿದ್ದಾರೆ. ಅನರ್ಹ ಶಾಸಕರ ಅರ್ಜಿ ವಿಚಾರಣೆ ಇನ್ನೂ ಕೋರ್ಟ್ನಲ್ಲಿ ಬಾಕಿ ಇದ್ದರೂ ಚುನಾವಣೆ ದಿನಾಂಕ ಪ್ರಕಟವಾಗಿದೆ ಎಂದರು.
ಉಪಚುನಾವಣೆ ನಡೆಯುವ ಬಗ್ಗೆ ಸಚಿವ ಸಿ ಟಿ ರವಿ ಮಾತನಾಡಿ, ಈಗ ಚುನಾವಣಾ ಆಯೋಗ ಉಪ ಚುನಾವಣೆಯನ್ನು ಘೋಷಣೆ ಮಾಡಿದೆ. ಆದರೆ, ಉಪ ಚುನಾವಣೆಗೆ ಕೆಲವೊಂದು ತಾಂತ್ರಿಕ ತೊಡಕುಗಳಿದ್ದು, ಹಿಂದಿನ ಸಭಾಧ್ಯಕ್ಷ ರಮೇಶ್ ಕುಮಾರ್ ಅವರ ತೀರ್ಪಿನ ಮೇಲೆ ಅನರ್ಹ ಶಾಸಕರು ಸುಪ್ರೀಂ ಕೋರ್ಟ್ಗೆ ಹೋಗಿದ್ದಾರೆ. ಅನರ್ಹ ಶಾಸಕರ ಅರ್ಜಿ ವಿಚಾರಣೆ ಇನ್ನೂ ಕೋರ್ಟ್ನಲ್ಲಿ ಬಾಕಿ ಇದ್ದರೂ ಚುನಾವಣೆ ದಿನಾಂಕ ಪ್ರಕಟವಾಗಿದೆ ಎಂದರು.
ಸುಪ್ರೀಂ ನೀಡುವ ತೀರ್ಪಿನ ಮೇಲೆ ಈ ಚುನಾವಣೆಗಳು ನಡೆಯತ್ತೋ ಇಲ್ಲವೋ, ನಡೆದರೆ ಯಾವಾಗ ಎನ್ನುವುದರ ಬಗ್ಗೆ ನಿರ್ಧಾರವಾಗಲಿದೆ. ಬಿಜೆಪಿ ಚುನಾವಣೆಗಳಿಗೆ ಸದಾ ಕಾಲ ಸಿದ್ಧವಾಗರುತ್ತೆ.ಈ ಉಪಚುನಾವಣೆಗಳಿಗೆ ಮಾತ್ರವಲ್ಲ ಸಂಘಟನೆಯಿಂದ ಎಲ್ಲ ಹಂತದಲ್ಲೂ ತಯಾರಿ ನಡೆದಿರುತ್ತದೆ ಎಂದು ಹೇಳಿದರು.