ಕರ್ನಾಟಕ

karnataka

ETV Bharat / state

ಮಾಜಿ ಶಾಸಕ ವೈಎಸ್‌ವಿ ದತ್ತ ಅವರಿಂದ ಬಡವರಿಗೆ ಅಗತ್ಯ ವಸ್ತುಗಳ ಪೂರೈಕೆ.. - Former MLA YSV Datta

ಲಾಕ್‌ಡೌನ್‌ನಿಂದಾಗಿ ಅಡ್ಡಪರಿಣಾಮ ಉಂಟಾಗುತ್ತಿದ್ದು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ 10 ಸಾವಿರ ಜನರು ಕಡೂರಿಗೆ ಬಂದಿದ್ದಾರೆ. ಅವರೆಲ್ಲರೂ ಅಂದೇ ದುಡಿದು ಅಂದೇ ಊಟ ಮಾಡುವ ಕುಟುಂಬಗಳು ಇದನ್ನು ಮನಗಂಡ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ಮಾಜಿ ಶಾಸಕ ವೈ. ಎಸ್. ವಿ. ದತ್ತ ಅವರು ಬಡವರಿಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ಮುಂದಾಗಿದ್ದಾರೆ.

Supply of necessities for the poor by former legislator Datta
ಮಾಜಿ ಶಾಸಕ ದತ್ತ ಅವರಿಂದ ಬಡವರಿಗೆ ಅಗತ್ಯ ವಸ್ತುಗಳನ್ನು ಪೂರೈಕೆ

By

Published : Apr 4, 2020, 2:19 PM IST

ಚಿಕ್ಕಮಗಳೂರು :ಕೊರೊನಾ ಭೀತಿ ಹಿನ್ನೆಲೆ ಲಾಕ್‌ಡೌನ್ ಆಗಿರುವ ಪರಿಣಾಮ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ಮಾಜಿ ಶಾಸಕ ವೈಎಸ್‌ವಿ ದತ್ತಾ ಅವರು ಬಡವರಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಮುಂದಾಗಿದ್ದಾರೆ.

ಮಾಜಿ ಶಾಸಕ ವೈಎಸ್‌ವಿ ದತ್ತ ಅವರಿಂದ ಬಡವರಿಗೆ ಅಗತ್ಯ ವಸ್ತುಗಳ ಪೂರೈಕೆ..

ಈವರೆಗೂ ತಾಲೂಕಿನಲ್ಲಿ ಯಾವುದೇ ಕೊರೊನಾ ಸೋಂಕಿತರು ಕಂಡು ಬಂದಿಲ್ಲ. ಆದರೆ, ಲಾಕ್‌ಡೌನ್‌ನಿಂದಾಗಿ ಅಡ್ಡಪರಿಣಾಮ ಉಂಟಾಗುತ್ತಿದೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ 10 ಸಾವಿರ ಜನ ಕಡೂರಿಗೆ ಬಂದಿದ್ದಾರೆ. ಅವರೆಲ್ಲರೂ ಅಂದೇ ದುಡಿದು ಅಂದೇ ಊಟ ಮಾಡುವ ಕುಟುಂಬಗಳು. ಇದನ್ನು ಮನಗಂಡ ದತ್ತಾ ಅವರು ನಿರ್ಗತಿಕರಿಗೆ ನೆರವಾಗಲು ಮುಂದಾಗಿದ್ದಾರೆ.

ಕ್ಷೇತ್ರದಲ್ಲಿ 11 ವರ್ಷಗಳ ಕಾಲ ಜನಪ್ರತಿನಿಧಿಯಾಗಿ ಕೆಲಸ ಮಾಡಿದ ಕಾರಣ ನಾನು ನನ್ನ ಕೈಲಾದ ಅಳಿಲು ಸೇವೆ ಮಾಡಲು ಮುಂದಾಗಿದ್ದೇನೆ. ಕಡೂರಿನಲ್ಲಿ 48 ಗ್ರಾಮ ಪಂಚಾಯತ್‌ ಗಳಿವೆ. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ 15 ಅತ್ಯಂತ ಕಡು ಬಡತನದ ಕುಟುಂಬ ಗುರುತಿಸಿ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಅವರಿಗೆ ಸಹಾಯ ಮಾಡಲಾಗುವುದು. ಪ್ರತಿ ಕುಟುಂಬಕ್ಕೂ ಆಹಾರ ಹಾಗೂ ಆರೋಗ್ಯದ ಕಿಟ್ ವಿತರಿಸಲಾಗುವುದು. ನಾಡಿದ್ದು ಬೆಳಗ್ಗೆ ಲಾಕ್‌ಡೌನ್ ನಿಯಮಕ್ಕೆ ಧಕ್ಕೆ ತರದ ಹಾಗೇ ಈ ಕಾರ್ಯ ನೆರವೇರಲಿದೆ ಎಂದು ತಿಳಿಸಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಜನರಿಗೆ ಪಡಿತರಕ್ಕಿಂತ ಮಾಸ್ಕ್‌ಗಳು ಹೆಚ್ಚಿನ ಅವಶ್ಯಕತೆಯಿದೆ. ಈಗಾಗಲೇ 50 ಸಾವಿರ ಮಾಸ್ಕ್‌ಗಳನ್ನು ವ್ಯವಸ್ಥೆ ಮಾಡಿದ್ದೇವೆ ಎಂದು ತಿಳಿಸಿದರು. ಮೋದಿ ಅವರು ಕರೆ ನೀಡಿರುವ ದೀಪ ಬೆಳಗುವ ಕಾರ್ಯಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ ದತ್ತ ಅವರು, ಪ್ರತೀ ಸಂದರ್ಭದಲ್ಲಿ ಕೋವಿಡ್-19 ರ ವಿಚಾರದಲ್ಲಿ ಅವರ ಕರೆ ನೀಡಿದ್ದನ್ನು ನಾವು ಪಾಲಿಸಿದ್ದೇವೆ. ಅವರು ರಚನಾತ್ಮಾಕ ಪ್ರಕ್ರಿಯೆಗೆ ಒತ್ತು ಕೊಡುವ ಬದಲು ಭಾವನಾತ್ಮಕ ಕ್ರಿಯೆಗೆ ಮುಂದಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ABOUT THE AUTHOR

...view details