ಕರ್ನಾಟಕ

karnataka

ETV Bharat / state

ಶಿಕ್ಷಣ ಇಲಾಖೆ ಎಡವಟ್ಟು: ಟಿಇಟಿ ಪರೀಕ್ಷೆಯಿಂದ ವಿದ್ಯಾರ್ಥಿಗಳು ವಂಚಿತ

ಶಿಕ್ಷಣ ಇಲಾಖೆ​ ಎಡವಟ್ಟಿನಿಂದಾಗಿ ಟಿಇಟಿ ಪರೀಕ್ಷೆಯಿಂದ ವಿದ್ಯಾರ್ಥಿಗಳು ವಂಚಿತರಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

By

Published : Nov 6, 2022, 5:40 PM IST

ಸರ್ಕಾರಿ ಪದವಿ ಪೂರ್ವ ಕಾಲೇಜು
ಸರ್ಕಾರಿ ಪದವಿ ಪೂರ್ವ ಕಾಲೇಜು

ಚಿಕ್ಕಮಗಳೂರು:ಶಿಕ್ಷಣ ಇಲಾಖೆ​ ಎಡವಟ್ಟಿನಿಂದಾಗಿ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)ಯಿಂದ ವಿದ್ಯಾರ್ಥಿಗಳು ವಂಚಿತರಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಪರೀಕ್ಷಾ ಅಭ್ಯರ್ಥಿ ಅವಿನಾಶ್ ಅವರು ಮಾತನಾಡಿದರು

ಚಿಕ್ಕಮಗಳೂರು ನಗರದ ಹಲವು ಪರೀಕ್ಷಾ ಕೇಂದ್ರಗಳಲ್ಲಿ ಟಿಇಟಿ ಪರೀಕ್ಷೆ ನಡೆಯುತ್ತಿದೆ. ಟಿಇಟಿ ಶಿಕ್ಷಕರ ನೇಮಕಾತಿ ಹಿನ್ನೆಲೆಯಲ್ಲಿ ನಡೆಯುತ್ತಿರುವ ಪ್ರವೇಶ ಪರೀಕ್ಷೆಯಾಗಿದೆ. ಆದರೆ ಶಿಕ್ಷಣ ಇಲಾಖೆಯ ತಪ್ಪಿನಿಂದಾಗಿ ಆನ್​ಲೈನ್​ನಲ್ಲಿ ಎರಡು ಬಾರಿಯೂ ಪ್ರತ್ಯೇಕ ಪರೀಕ್ಷಾ ಕೇಂದ್ರವನ್ನು ತೋರಿಸುತ್ತಿದೆ. ಹೀಗಾಗಿ ಬಸವನಹಳ್ಳಿ ಶಾಲೆ ಪರೀಕ್ಷಾ ಕೇಂದ್ರದ ಅಭ್ಯರ್ಥಿಗಳು ಕಂಗಾಲಾಗಿದ್ದಾರೆ.

ಇಲ್ಲದ ಸಬೂಬು ನೀಡಿ ಪರೀಕ್ಷಾ ಕೇಂದ್ರದೊಳಗೆ ಪ್ರವೇಶವನ್ನು ಸಿಬ್ಬಂದಿ ನಿರಾಕರಿಸಿದ್ದು, ಪರೀಕ್ಷೆ ಬರೆಯಲು ಬಳ್ಳಾರಿಯಿಂದ ಬಂದಿದ್ದ ಅಭ್ಯರ್ಥಿಗಳು ವಂಚಿತರಾಗಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

"ಹಾಲ್​ ಟಿಕೆಟ್​ನಲ್ಲಿ ಪರೀಕ್ಷಾ ಕೇಂದ್ರವನ್ನು ಚೇಂಜ್​ ಆಗಿ ಕೊಟ್ಟಿದ್ದಾರೆ. ಅಪ್ಲಿಕೇಷನ್​ನಲ್ಲಿ ಮೊದಲಿಗೆ ಬೇರೆ ಪರೀಕ್ಷಾ ಕೇಂದ್ರವನ್ನು ಕೊಟ್ಟಿದ್ದಾರೆ. ಈಗ ಡೌನ್ಲೋಡ್ ಮಾಡಿಕೊಂಡು ನೋಡಿದ್ರೆ ಪ್ರೆಸೆಂಟ್ ಅಡ್ರೆಸ್​ ಕೊಟ್ಟಿದ್ದಾರೆ. ಇವರು ಯಾವುದಾದರೂ ಒಂದು ಡಿಪಾರ್ಟ್​ಮೆಂಟ್ ಅಥವಾ ಎಕ್ಸಾಂ ಸೆಂಟರ್​ನ ಅಡ್ರೆಸ್​ ಕೊಟ್ರೆ ಸರಿ ಇರುತ್ತದೆ. ನಾವು ಬಳ್ಳಾರಿಯಿಂದ ಇಲ್ಲಿಗೆ ಆಗಮಿಸಿದ್ದೇವೆ. ಅದು ಅಲ್ಲದೆ ಇವತ್ತು ಭಾನುವಾರ ಆಗಿದೆ. ಹಾಗಾಗಿ ಇವತ್ತು ಯಾವುದೇ ಜೆರಾಕ್ಸ್​ ಶಾಪ್ ಕೂಡಾ ಓಪನ್ ಆಗಿಲ್ಲ. ಬೆಳಗ್ಗೆ ಒಂದು ಸೆಂಟರ್ ಅಡ್ರೆಸ್​ ಕೊಟ್ಟಿದ್ರು. ಅಲ್ಲಿಗೆ ಹೋಗಿದ್ದಕ್ಕೆ ಅಲ್ಲಿ ಎಕ್ಸಾಂ ನಡೆಸಲಿಲ್ಲ. ಅಲ್ಲಿ ಅಡ್ರೆಸ್ ಸರಿ ಇದೆ. ಆದರೆ ಅಲ್ಲಿ ನನ್ನ ರೋಲ್​ ನಂಬರ್ ಹಾಗೂ ರಿಜಿಸ್ಟೇಷನ್​ ನಂಬರ್ ಇಲ್ಲ. ಈಗ ಮತ್ತೆ ಡೌನ್ಲೋಡ್ ಮಾಡಿಕೊಂಡರೆ, ಹಾಲ್​ ಟಿಕೆಟ್​ನಲ್ಲಿ ಬಸವನಹಳ್ಳಿ ಕಾಲೇಜಿನ ಅಡ್ರೆಸ್​ ತೋರಿಸುತ್ತಿದೆ. ಹೀಗಾಗಿ ನಾವು ಸಂಕಷ್ಟಪಡುವಂತಾಗಿದೆ" ಎನ್ನುತ್ತಾರೆ ಅವಿನಾಶ್.

ಇದನ್ನೂ ಓದಿ:ಶಿಕ್ಷಣ ಇಲಾಖೆ ಎಡವಟ್ಟು: ಪರೀಕ್ಷಾ ಕೇಂದ್ರ ಸಿಗದೆ ಟಿಇಟಿ ಪರೀಕ್ಷಾರ್ಥಿಗಳ ಪರದಾಟ

ABOUT THE AUTHOR

...view details