ಚಿಕ್ಕಮಗಳೂರು :ನಗರದಲ್ಲಿ ಬಡವರಿಗೆ ನೀಡುವ ಪಡಿತರದಲ್ಲಿ ಕಲ್ಲು-ಮಣ್ಣು ಮಿಶ್ರಣ ಆಗಿರೋದನ್ನು ನೀಡಲಾಗುತ್ತಿದೆ. ಜಿಲ್ಲೆಯ ಮಲೆನಾಡ ಕೆಲ ಭಾಗಗಳಲ್ಲಿ ಕಲ್ಲು-ಮಣ್ಣು ಮಿಶ್ರಿತ ಅಕ್ಕಿ ವಿತರಣೆ ಆಗುತ್ತಿದೆ. ಕೂಲಿ ಕಾರ್ಮಿಕರಿಗೆ ಸಿಕ್ಕಿರುವ ಅಕ್ಕಿಯಲ್ಲಿ ಮಣ್ಣು-ಕಲ್ಲು ಹೆಚ್ಚಾಗಿ ಕಂಡು ಬರುತ್ತಿದೆ.
ಬಡವರಿಗೆ ನೀಡುವ ಪಡಿತರದಲ್ಲಿ ಕಲ್ಲು-ಮಣ್ಣು.. ಗುಣಮಟ್ಟದ ಪಡಿತರ ನೀಡುವಂತೆ ಆಗ್ರಹ - emand for quality rations Chikmagalur
ಮಲೆನಾಡ ಕೆಲ ಭಾಗಗಳಲ್ಲಿ ಕಲ್ಲು-ಮಣ್ಣು ಮಿಶ್ರಿತ ಅಕ್ಕಿ ವಿತರಣೆ ಆಗುತ್ತಿದ್ದು, ಕೂಲಿ ಕಾರ್ಮಿಕರಿಗೆ ಸಿಕ್ಕಿರುವ ಅಕ್ಕಿಯಲ್ಲಿ ಮಣ್ಣು-ಕಲ್ಲು ಹೆಚ್ಚಾಗಿ ಕಂಡು ಬರುತ್ತಿದೆ.
ಬಡವರಿಗೆ ನೀಡುವ ಪಡಿತರದಲ್ಲಿ ಕಲ್ಲು-ಮಣ್ಣು ಪತ್ತೆ
ಈಗಾಗಲೇ ಕೆಲಸವಿಲ್ಲದೆ ಕಂಗಾಲಾಗಿರುವ ಕಾರ್ಮಿಕರಿಗೆ ಅನ್ನದಲ್ಲೂ ಕಲ್ಲು ಸಿಗುತ್ತಿದೆ. ಸರ್ಕಾರದಿಂದ ನೀಡುವ ಪಡಿತರದಲ್ಲಿ ಕಲ್ಲು-ಮಣ್ಣು ಪತ್ತೆ ಆಗಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಳೇ ಮೂಡಿಗೆರೆ ಸೂಸೈಟಿಯಲ್ಲಿ ವಿತರಣೆಯಾಗುತ್ತಿರುವ ಪಡಿತರದ ಬಗ್ಗೆ ಈ ಆರೋಪ ಕೇಳಿ ಬಂದಿದೆ.
ಇನ್ನು ಕಳಪೆ ಗುಣಮಟ್ಟದ ಅಕ್ಕಿ ವಿತರಣೆ ಮಾಡಿರುವ ಸರ್ಕಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರಿಯಾದ ಹಾಗೂ ಗುಣಮಟ್ಟದ ಪಡಿತರ ನೀಡುವಂತೆ ಆಗ್ರಹಿಸುತ್ತಿದ್ದಾರೆ.