ಕರ್ನಾಟಕ

karnataka

ETV Bharat / state

ರಾಜ್ಯಾದ್ಯಂತ ವಿದ್ಯುತ್ ಲೋಡ್ ಶೆಡ್ಡಿಂಗ್​; ಸಚಿವ ಕೆ ಜೆ ಜಾರ್ಜ್ ಹೇಳಿದ್ದೇನು? - ಸ್ವಾತಂತ್ರ್ಯ ದಿನಾಚರಣೆ

ಥರ್ಮಲ್ ಪ್ಲಾಂಟ್ ಪವರ್ ಜನರೇಟರ್ ಮಾಡುತ್ತಿರುವುದರಿಂದ ವಿದ್ಯುತ್ ಲೋಡ್ ಶೆಡ್ ಉಂಟಾಗಿದೆ ಎಂದು ಸಚಿವ ಕೆ.ಜೆ ಜಾರ್ಜ್ ತಿಳಿಸಿದರು.

ಸಚಿವ ಕೆ.ಜೆ ಜಾರ್ಜ್
ಸಚಿವ ಕೆ.ಜೆ ಜಾರ್ಜ್

By

Published : Aug 15, 2023, 7:25 PM IST

ರಾಜ್ಯಾದ್ಯಂತ ವಿದ್ಯುತ್ ಲೋಡ್ ಶೆಡ್ ಬಗ್ಗೆ ಇಂಧನ ಸಚಿವ ಕೆಜೆ ಜಾರ್ಜ್ ಹೇಳಿಕೆ

ಚಿಕ್ಕಮಗಳೂರು :ಸಾಮಾನ್ಯವಾಗಿ ಮಳೆಗಾಲದಲ್ಲಿ ಥರ್ಮಲ್ ಪ್ಲಾಂಟ್​ಗಳನ್ನು ಕಡಿಮೆ ಸರ್ವೀಸ್ ಮಾಡುತ್ತಿದ್ದೆವು. ಆದರೇ ಈ ಬಾರಿ ಮಳೆ ಕಡಿಮೆಯಾದ ಕಾರಣ ಥರ್ಮಲ್ ಪವರ್ ಪ್ಲಾಂಟ್ ಜನರೇಟರ್ ಮಾಡೋದು ಆರಂಭವಾಗಿದೆ. ಹೀಗಾಗಿ ಥರ್ಮಲ್ ಪ್ಲಾಂಟ್ ಜಾಸ್ತಿ ಮಾಡಲು ಆದೇಶ ಮಾಡಿದ್ದು, ವಿದ್ಯುತ್ ಲೋಡ್ ಶೆಡ್ಡಿಂಗ್​ ಆಗಿದೆ ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ಹೇಳಿದರು.

ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಕುರಿತು ಇಂಧನ ಸಚಿವ ಜಾರ್ಜ್ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರತಿಕ್ರಿಯೆ ನೀಡಿದ್ದು, ಈಗಾಗಲೇ ಥರ್ಮಲ್ ಪವರ್ ಪ್ಲಾಂಟ್ ಜನರೇಟರ್​ ಕಾರ್ಯ ನಡೆಯುತ್ತಿದೆ. 10 ದಿನಗಳಲ್ಲಿ ಥರ್ಮಲ್ ಪ್ಲಾಂಟ್​ಗಳ ಸರ್ವೀಸ್ ಮಾಡೋದನ್ನು ನಿಲ್ಲಿಸುತ್ತಾರೆ. ಇನ್ನೊಂದೆಡೆ ನಮ್ಮ ಕಲ್ಲಿದ್ದಲು ಕ್ವಾಲಿಟಿ ಅಷ್ಟು ಸಾಕಾಗಲ್ಲ. ಆಮದು ಮಾಡಿಕೊಂಡ ಕೋಲ್ ಜೊತೆ ಮಿಕ್ಸ್ ಮಾಡಬೇಕು. ಇತ್ತೀಚಿಗೆ ಮಹಾರಾಷ್ಟ್ರದಲ್ಲಿ ಮಳೆಯಾದ ಪರಿಣಾಮ ರೈಲಿನಲ್ಲಿ ತರುವಾಗ ಕೋಲ್ ಹಸಿಯಾಗಿದೆ ಎಂದರು.

ಆದರೇ ನಾವು ಅದೃಷ್ಟವಂತರು, ಕರ್ನಾಟಕದಲ್ಲಿ ಸೋಲಾರ್ ಪವರ್​ ಅನ್ನು ಹೆಚ್ಚು ಬಳಸುತ್ತಿದ್ದೇವೆ. ಕಳೆದ 4 ದಿನಗಳಲ್ಲಿ ದಕ್ಷಿಣ ಭಾರತದಲ್ಲಿ ಗಾಳಿ ಕೂಡ ಕಡಿಮೆ ಇತ್ತು. ಆಗ ವಿಂಡ್​ ಪವರ್​ ಉತ್ಪಾದನೆ ಕಡಿಮೆ ಆಯ್ತು. ನಿನ್ನೆ-ಮೊನ್ನೆಯಿಂದ ಪಿಕ್ ಅಪ್ ಆಗುತ್ತಿದೆ. ಸೋಲಾರ್ ಸಬ್ ಸ್ಟೇಷನ್​ನಲ್ಲಿ ಸೋಲಾರ್ ಉತ್ಪಾದನೆ ಮಾಡುತ್ತೇವೆ. 10-20-30 ಎಕರೆ ಮಾಡಿ ರಾಜ್ಯಾದ್ಯಂತ ಸೋಲಾರ್ ಉತ್ಪಾದನೆಯನ್ನು ಸಬ್ ಸ್ಟೇಷನ್‌ಗೆ ಕೊಡುತ್ತೇವೆ ಎಂದು ಸಚಿವ ಜಾರ್ಜ್ ಮಾಹಿತಿ ನೀಡಿದ್ರು.

ಕಾಫಿನಾಡಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ :ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನ ಸಂಭ್ರಮದಿಂದ ಆಚರಿಸಲಾಯ್ತು, ನಗರದ ಸುಭಾಸ್ ಚಂದ್ರ ಬೋಸ್ ಆಟದ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸಚಿವ ಕೆ ಜೆ ಜಾರ್ಜ್ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್, ಶಾಸಕ ಹೆಚ್.ಡಿ ತಮ್ಮಯ್ಯ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಎಸ್ಪಿ ಉಮಾ ಪ್ರಶಾಂತ್ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ :ಶಿಕ್ಷಕರ ದಿನಾಚರಣೆಯಂದು ಇ- ಲೈಬ್ರರಿಗೆ ಮರು ಚಾಲನೆ: ಸಚಿವ ಮಧು ಬಂಗಾರಪ್ಪ

ABOUT THE AUTHOR

...view details