ಕರ್ನಾಟಕ

karnataka

ETV Bharat / state

ಪಾಕಿಸ್ತಾನ್ ಜಿಂದಾಬಾದ್ ಎಂದವರು ನಿನ್ನೆಯ ರೈತ ಹೋರಾಟದಲ್ಲಿದ್ದರು : ಶೋಭಾ ಕರಂದ್ಲಾಜೆ - Shobha Karandlaje

ಕೆಂಪುಕೋಟೆ ಹತ್ತಿದವರು ಯಾರೂ ರೈತರಲ್ಲ. ಕೆನಡಾದ ಖಲಿಸ್ತಾನ್ ಮೂವ್‍ಮೆಂಟ್‍ನವರು ಈ ಹೋರಾಟಕ್ಕೆ ಬೆಂಬಲ ಕೊಟ್ಟಿದ್ದಾರೆ. ನಿಜವಾದ ರೈತರು ಈ ರೀತಿ ಮಾಡಲು ಸಾಧ್ಯವಿಲ್ಲ. ರೈತರ ಹೆಸರಿನಲ್ಲಿ ಹೋರಾಟದ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ..

dsd
ಶೋಭಾ ಕರಂದ್ಲಾಜೆ ಹೇಳಿಕೆ

By

Published : Jan 27, 2021, 3:47 PM IST

ಚಿಕ್ಕಮಗಳೂರು :ಜೆಎನ್‍ಯುನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದವರು ನಿನ್ನೆ ಕೆಂಪುಕೋಟೆ ಬಳಿ ನಡೆದ ರೈತರ ಹೋರಾಟದಲ್ಲಿ ಭಾಗಿಯಾಗಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ದೆಹಲಿ ಟ್ರ್ಯಾಕ್ಟರ್ ರ್ಯಾಲಿ ಕುರಿತಂತೆ ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ..

ನಗರದಲ್ಲಿ ಮಾತನಾಡಿದ ಅವರು, ಪ್ರತಿಭಟನೆಯ ನೇತೃತ್ವವನ್ನು ಉಮ್ಮರ್ ಖಾಲಿದ್ ಬಿಡುಗಡೆಗೊಳಿಸುವಂತೆ ದೇಶದ್ರೋಹಿ ಶಕ್ತಿವಹಿಸಿವೆ. ಕೆಂಪು ಕೋಟೆಗೆ ನುಗ್ಗಿ ಗಣರಾಜ್ಯದ ದಿನ ಬೇರೆ ಧ್ವಜ ಹಾರಿಸಿ ರೈತರು ಕೆಟ್ಟ ಪದ್ಧತಿ ಅನುಸರಿಸಿದ್ದಾರೆ.

ಕೆಂಪುಕೋಟೆ ಹತ್ತಿದವರು ಯಾರೂ ರೈತರಲ್ಲ. ಕೆನಡಾದ ಖಲಿಸ್ತಾನ್ ಮೂವ್‍ಮೆಂಟ್‍ನವರು ಈ ಹೋರಾಟಕ್ಕೆ ಬೆಂಬಲ ಕೊಟ್ಟಿದ್ದಾರೆ. ನಿಜವಾದ ರೈತರು ಈ ರೀತಿ ಮಾಡಲು ಸಾಧ್ಯವಿಲ್ಲ. ರೈತರ ಹೆಸರಿನಲ್ಲಿ ಹೋರಾಟದ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details