ಚಿಕ್ಕಮಗಳೂರು: ಶೃಂಗೇರಿಯಲ್ಲಿ ನಡೆದ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಆರೋಪದಡಿ ಶೃಂಗೇರಿ ಠಾಣೆಯ ಪಿಎಸ್ಐ ಕೀರ್ತಿ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಕೀರ್ತಿ ಕುಮಾರ್ ಅವರನ್ನು ಶೃಂಗೇರಿಯಿಂದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಠಾಣೆಗೆ ವರ್ಗಾವಣೆ ಮಾಡಲಾಗಿದ್ದು, ಕಳೆದ ಎರಡು ದಿನಗಳ ಹಿಂದೆ ಇದೇ ಠಾಣೆಯ ಸಿಪಿಐ ಸಿದ್ದರಾಮಯ್ಯ ಸಸ್ಪಂಡೆ ಆಗಿದ್ದರು. ಕರ್ತವ್ಯ ಲೋಪ ಹಿನ್ನೆಲೆ ಹಿಂದಿನ ಅಧಿಕಾರಿಗಳನ್ನು ಎಎಸ್ಪಿ ಕೈ ಬಿಟ್ಟಿದ್ದರು. ಸದ್ಯ ಈ ಪ್ರಕರಣದ ತನಿಖಾಧಿಕಾರಿ ಎಎಸ್ಪಿ ಶೃತಿ ಆಗಿದ್ದು, ಅವರೇ ತನಿಖೆಯನ್ನು ನಡೆಸುತ್ತಿದ್ದಾರೆ.