ಚಿಕ್ಕಮಗಳೂರು:ಡಿಜೆ ಹಳ್ಳಿ ಗಲಭೆ ಪ್ರಕರಣವನ್ನು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ತೀವ್ರವಾಗಿ ಖಂಡಿಸಿದ್ದಾರೆ.
ಗಲಭೆ ಪ್ರಕರಣದ ಬಗ್ಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು: ಶಾಸಕ ಟಿ.ಡಿ.ರಾಜೇಗೌಡ - Sringeri MLA TD Rajegowda
ಶಾಸಕ ಅಖಂಡ ಶ್ರೀನಿವಾಸಮೂರ್ತಿ ತುಂಬಾ ಒಳ್ಳೆಯವರು. ಅವರ ಸಂಬಂಧಿಕರು ನೀಡಿದ ಹೇಳಿಕೆಗೆ, ಅವರ ಮನೆಯ ಮೇಲೆ ದಾಂಧಲೆ ಮಾಡಿರುವುದು ತಪ್ಪು. ಈ ಬಗ್ಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಹೇಳಿದ್ದಾರೆ.
ಈ ರೀತಿಯ ಘಟನೆಯನ್ನು ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ಯಾರೇ ಮಾಡಲಿ ಅದು ತಪ್ಪು. ಧಾರ್ಮಿಕ ಗುರುಗಳ ಅಥವಾ ಧಾರ್ಮಿಕತೆಯ ಬಗ್ಗೆ ಹಗುರವಾದ ಹೇಳಿಕೆ ನೀಡುವುದನ್ನು ಎಲ್ಲ ಸಮುದಾಯದವರು ನಿಲ್ಲಿಸಬೇಕು. ಅದರಿಂದ ಇಂತಹ ಪ್ರಕರಣಗಳು ನಡೆಯುವುದಿಲ್ಲ. ಪೊಲೀಸರಿಗೆ ದೂರು ನೀಡಿ, ನ್ಯಾಯ ಕೇಳಬೇಕಿತ್ತು. ಅದು ಬಿಟ್ಟು ದಾಂಧಲೆ ಮಾಡಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಶಾಸಕ ಅಖಂಡ ಶ್ರೀನಿವಾಸಮೂರ್ತಿ ತುಂಬಾ ಒಳ್ಳೆಯವರು. ಅವರ ಸಂಬಂಧಿಕರು ನೀಡಿದ ಹೇಳಿಕೆಗೆ, ಅವರ ಮನೆಯ ಮೇಲೆ ದಾಂಧಲೆ ಮಾಡಿರುವುದು ತಪ್ಪು. ಈ ಬಗ್ಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು.
ಒಂದು ಸಮುದಾಯದ ವಿರುದ್ಧ ಹೇಳಿಕೆ ನೀಡಿರುವ ವ್ಯಕ್ತಿಗಳ ಮೇಲೆಯೂ ಕ್ರಮ ಜರುಗಿಸಬೇಕು. ಎಲ್ಲಿಯೂ ಈ ರೀತಿಯ ಘಟನೆ ಆಗಬಾರದು. ಇಂತಹ ಘಟನೆಗಳಿಂದ ಅಮಾಯಕರಿಗೆ ತೊಂದರೆಯಾಗುತ್ತಿದ್ದು, ಸರಿಯಾದ ಕ್ರಮ ತೆಗೆದುಕೊಂಡರೆ ಈ ರೀತಿಯ ಘಟನೆ ಮತ್ತೆ ಮರುಕಳಿಸುವುದಿಲ್ಲ ಎಂದರು.