ಚಿಕ್ಕಮಗಳೂರು:ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆ ಹಲವು ಅವಾಂತರಗಳನ್ನು ಸೃಷ್ಟಿ ಮಾಡಿದೆ. ಹೀಗಾಗಿ ಇಂದು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ನೆರೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ರು.
ನೆರೆಹಾನಿ ಪ್ರದೇಶಗಳಿಗೆ ಶೃಂಗೇರಿ ಶಾಸಕ ರಾಜೇಗೌಡ ಭೇಟಿ - Sringeri MLA T. D. Rajegowda
ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಚಿಕ್ಕಮಗಳೂರು ಜಿಲ್ಲೆಯ ಹಲವು ನೆರೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದ್ರು.
ಪ್ರವಾಹ ಪೀಡಿತ ಪ್ರದೇಶಕ್ಕೆ ಟಿ.ಡಿ. ರಾಜೇಗೌಡ ಭೇಟಿಪ್ರವಾಹ ಪೀಡಿತ ಪ್ರದೇಶಕ್ಕೆ ಟಿ.ಡಿ. ರಾಜೇಗೌಡ ಭೇಟಿ
ಎನ್.ಆರ್. ಪುರ ತಾಲೂಕಿನ ಕಾನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಹರಾವರಿ ಗ್ರಾಮದಲ್ಲಿ ಸುರಿದ ಮಹಾಮಳೆಗೆ ಸುಮಾರು 5ರಿಂದ 6 ಕೆರೆಯ ಕೋಡಿ ಒಡೆದು ಅಕ್ಕಪಕ್ಕದಲ್ಲಿದ್ದಂತಹ ತೋಟಗಳಿಗೆ ನೀರು ನುಗ್ಗಿದೆ.
ಇದರಿಂದ ಈ ಭಾಗದಲ್ಲಿ 70 ಎಕರೆಗೂ ಅಧಿಕ ತೋಟ ಕೊಚ್ಚಿ ಹೋಗಿದ್ದು, ಸಾವಿರಾರು ಅಡಿಕೆ, ತೆಂಗಿನ ಮರಗಳು, ಕಾಫಿ ಗಿಡಗಳು ಕೊಚ್ಚಿಕೊಂಡು ಹೋಗಿವೆ. ಈ ಎಲ್ಲಾ ಸ್ಥಳಗಳಿಗೆ ಶೃಂಗೇರಿ ಶಾಸಕ ಟಿ. ಡಿ.ರಾಜೇಗೌಡ ಭೇಟಿ ನೀಡಿ ಸ್ಥಳ ವೀಕ್ಷಣೆ ಮಾಡಿದರು.