ಚಿಕ್ಕಮಗಳೂರು:ನಗರದ ಐಡಿಎಸ್ಜಿ ಕಾಲೇಜು ಪಕ್ಕದಲ್ಲಿ ನಿರ್ಮಾಣವಾಗಿರುವ ಮಹಾಲಕ್ಷ್ಮಿ ದೇಗುಲದ ಉದ್ಘಾಟನೆ ಹಾಗೂ ಕುಂಬಾಭಿಷೇಕ ಕಾರ್ಯಕ್ರಮವನ್ನ ಶೃಂಗೇರಿ ಶಾರದಾ ಪೀಠದ ಕಿರಿಯ ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ ನೆರವೇರಿಸಿದರು.
ಚಿಕ್ಕಮಗಳೂರಿನಲ್ಲಿ ಮಹಾಲಕ್ಷ್ಮಿ ದೇಗುಲ ಉದ್ಘಾಟಿಸಿದ ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ.. - ಚಿಕ್ಕಮಗಳೂರು ಸುದ್ದಿ
ದೇಗುಲದ ನಾಲ್ಕು ಉಪ ದಿಕ್ಕುಗಳಲ್ಲೂ ಶ್ರೀರಾಮ,ಆಂಜನೇಯ,ಗಣಪತಿ ದೇವಾಲಯಗಳ ಆವರಣವನ್ನ ನಿರ್ಮಾಣ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಶೃಂಗೇರಿಯ ಕಿರಿಯ ಶ್ರೀಗಳು ಭಾಗವಹಿಸಿರೋದಕ್ಕೆ ಭಕ್ತರಲ್ಲಿ ಹರ್ಷ ಮನೆ ಮಾಡಿದೆ. ಅವರನ್ನು ಚಿಕ್ಕಮಗಳೂರು ನಗರದಲ್ಲಿ ಭವ್ಯವಾಗಿ ಸ್ವಾಗತ ಮಾಡಲಾಯಿತು.
ಇದೇ ವೇಳೆ ಸ್ವಾಮೀಜಿಗಳು ಚಂದ್ರ ಮೌಳೇಶ್ವರ ಪೂಜಾ ಕಾರ್ಯಕ್ರಮದಲ್ಲೂ ಭಾಗವಹಿಸಿ ಭಕ್ತರಿಗೆ ಆಶೀರ್ವಚನ ನೀಡಿದರು. ಈ ಮಹಾಲಕ್ಷ್ಮಿ ದೇವಾಲಯ ನೂತನವಾಗಿ ನಿರ್ಮಾಣವಾಗಿದೆ. ಪ್ರಧಾನ ದೇವತೆ ಮಹಾಲಕ್ಷ್ಮಿ ಜೊತೆಗೆ ಅಮೃತ ಶಿಲೆಯ ಅಷ್ಟ ಲಕ್ಷ್ಮೀಯರಾದ ಆದಿಲಕ್ಷ್ಮಿ, ಸಂತಾನಲಕ್ಷ್ಮಿ,ಗಜಲಕ್ಷ್ಮಿ,ಧನಲಕ್ಷ್ಮಿ,ಭಾಗ್ಯಲಕ್ಷ್ಮಿ,ವೀರಲಕ್ಷ್ಮಿ,ವಿಜಯಲಕ್ಷ್ಮಿ, ಐಶ್ವರ್ಯ ಲಕ್ಷ್ಮಿ ವಿಗ್ರಹಗಳು ಈ ದೇವಾಲಯದಲ್ಲಿವೆ.