ಚಿಕ್ಕಮಗಳೂರು: ಶ್ರೀರಾಮಸೇನೆಯ ಮುಖಂಡರು ಹಾಗೂ ಕಾರ್ಯಕರ್ತರು ಗುರುವಾರ ದತ್ತಪೀಠಕ್ಕೆ ಭೇಟಿ ನೀಡಿ, ಹೋಮ ಮಂಟಪವನ್ನು ಶುದ್ಧೀಕರಣಗೊಳಿಸುವ ಕೆಲಸ ಮಾಡಿದ್ದಾರೆ. ಗಂಗಾ-ಯಮುನ-ಸರಸ್ವತಿ ನದಿಯ ಸಂಗಮ ತೀರ್ಥದಿಂದ ಶುದ್ಧಿ ಮಾಡಲಾಗಿದೆ. ನಂತರ ಗೋ ಮೂತ್ರ ಹಾಕಿ, ಗೋವಿಗೂ ಹೋಮ ಮಂಟಪದಲ್ಲಿ ಪೂಜೆ ಮಾಡಿದ್ದಾರೆ.
ದತ್ತಪೀಠಕ್ಕೆ ಶ್ರೀರಾಮ ಸೇನೆ ಕಾರ್ಯಕರ್ತರು ಭೇಟಿ: ಗೋ ಮೂತ್ರದಿಂದ ಹೋಮ ಮಂಟಪ ಶುದ್ಧೀಕರಣ - ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಪೀಠದಲ್ಲಿರುವ ಹೋಮ ಮಂಟಪ
ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಪೀಠದಲ್ಲಿರುವ ಹೋಮ ಮಂಟಪವನ್ನು, ಶ್ರೀರಾಮಸೇನೆ ಕಾರ್ಯಕರ್ತರು ಗೋ ಮೂತ್ರದಿಂದ ಶುದ್ಧೀಕರಣ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿಯ ಅಚಾತುರ್ಯಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಆಗ್ರಹ ಮಾಡಿದ್ದಾರೆ.
ಗೋ ಮೂತ್ರದಿಂದ ಹೋಮ ಮಂಟಪ ಶುದ್ಧೀಕರಣ
ಗೋ ಮೂತ್ರದಿಂದ ಹೋಮ ಮಂಟಪ ಶುದ್ಧೀಕರಣ
ಕಳೆದ ಎರಡು ದಿನಗಳ ಹಿಂದೆ ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಪೀಠದಲ್ಲಿ ಅನ್ಯ ಧರ್ಮದವರು ಹೋಮ ಮಂಟಪದಲ್ಲಿ ಮಾಂಸದೂಟ ಮಾಡಿದ್ದರು. ಈ ಹಿನ್ನೆಲೆ ಇಂದು ಹಿಂದೂ ಶ್ರೀರಾಮಸೇನೆಯ ಮುಖಂಡರು ದತ್ತಪೀಠಕ್ಕೆ ಭೇಟಿ ನೀಡಿ, ಶುದ್ಧೀಕರಣ ಮಾಡಿದ್ದಾರೆ. ಅರ್ಚಕರ ನೇತೃತ್ವದಲ್ಲಿ ಪೂಜೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಈ ರೀತಿಯ ಅಚಾತುರ್ಯಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಆಗ್ರಹ ಮಾಡಿದ್ದಾರೆ.
ಇದನ್ನೂ ಓದಿ:ದತ್ತಪೀಠದಲ್ಲಿ ಮಾಂಸಾಹಾರ ಸೇವನೆ ಅಕ್ಷಮ್ಯ ಅಪರಾಧ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು: ಸಿ.ಟಿ. ರವಿ ಆಗ್ರಹ