ಕರ್ನಾಟಕ

karnataka

ETV Bharat / state

ಸ್ಪೀಕರ್ ರಮೇಶ್​​ ಕುಮಾರ್​​​ ನಿರ್ಧಾರ ಸ್ವಾಗತರ್ಹ: ಶಾಸಕ ರಾಜೇಗೌಡ

ಅತೃಪ್ತ ಶಾಸಕರ ವಿಚಾರದಲ್ಲಿ ಸ್ಪೀಕರ್ ಕೆ.ರಮೇಶ್ ಕುಮಾರ್ ಅವರು ತೆಗೆದುಕೊಂಡಿರುವ ತೀರ್ಮಾನವನ್ನು ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಹೃದಯಪೂರ್ವಕವಾಗಿ ಸ್ವಾಗತಿಸಿದ್ದು, ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಆಗಲು ರಾಜ್ಯಪಾಲರು ಅವಕಾಶ ಕೊಡಬೇಕಾದರೆ ಶೇ. 51ರಷ್ಟು ಮತ ಇದೆಯಾ ಎಂದು ಯೋಚನೆ ಮಾಡಬೇಕಿತ್ತು. ಆದರೆ ರಾಜೀನಾಮೆ ಅಂಗೀಕಾರ ಆಗುವುದಕ್ಕಿಂತ ಮುಂಚೆ ಮುಖ್ಯಮಂತ್ರಿ ಆಗಲು ಅವಕಾಶ ಮಾಡಿಕೊಟ್ಟಿರುವುದು ಸಂವಿಧಾನ ವಿರೋಧಿ ನಿಲುವು ಎಂದಿದ್ದಾರೆ.

ಟಿ.ಡಿ ರಾಜೇಗೌಡ

By

Published : Jul 28, 2019, 8:28 PM IST

ಚಿಕ್ಕಮಗಳೂರು: ಅತೃಪ್ತ ಶಾಸಕರ ವಿಚಾರದಲ್ಲಿ ಸ್ಪೀಕರ್ ಕೆ.ರಮೇಶ್ ಕುಮಾರ್ ಅವರು ತೆಗೆದುಕೊಂಡಿರುವ ತೀರ್ಮಾನವನ್ನು ಶೃಂಗೇರಿಯ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಹೃದಯಪೂರ್ವಕವಾಗಿ ಸ್ವಾಗತಿಸಿದ್ದು, ರಾಜ್ಯಪಾಲರ ಮೇಲೆ ಗರಂ ಆಗಿದ್ದಾರೆ.

ಸ್ಪೀಕರ್ ಕೆ.ರಮೇಶ್ ಕುಮಾರ್ ನಿರ್ಧಾರ ಕುರಿತು ಟಿ.ಡಿ ರಾಜೇಗೌಡ ಪ್ರತಿಕ್ರಿಯೆ

ಜನರು ಆಯ್ಕೆ ಮಾಡಿದ ಮೇಲೆ ಅವಧಿ ಪೂರ್ಣ ಆಗುವವರೆಗೂ ಕೆಲಸ ಮಾಡಬೇಕು. ಹಣ ಕಂಡರೆ ಹೆಣ ಕೂಡ ಬಾಯಿ ಬಿಡುವ ರೀತಿಯಲ್ಲಿ ಸಾವಿರಾರೂ ಕೋಟಿ ರೂ. ಬೆಲೆ ಕೊಟ್ಟು ಶಾಸಕರನ್ನು ಕೊಂಡುಕೊಳ್ಳುತ್ತಿದ್ದಾರೆ. ಇದಕ್ಕೆ ಹಣ ಎಲ್ಲಿಂದ ಬರುತ್ತದೆ. ಇದಕ್ಕೆ ಕಡಿವಾಣ ಹಾಕಬೇಕಿದೆ. ಶಾಸಕರು ಆರೋಗ್ಯ ಸಮಸ್ಯೆ ಇತರೆ ಸಮಸ್ಯೆಗಳ ಕುರಿತು ರಾಜೀನಾಮೆ ನೀಡಬಹುದು. ಆದ್ರೆ ಗುಂಪು ಗುಂಪಾಗಿ ರಾಜೀನಾಮೆ ನೀಡಿ, ರೆಸಾರ್ಟ್​ಗೆ ಹೋಗಿ ಕುಳಿತಿರೋದು ತಪ್ಪು. ಹಾಗಾಗಿ ಇವರು ಪಕ್ಷಾಂತರ ನಿಷೇಧ ಕಾಯ್ದೆಗೆ ಒಳಪಡುತ್ತಾರೆ ಎಂದರು.

ರಾಜ್ಯಪಾಲರು, ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಆಗಲು ಅವಕಾಶ ಕೊಡಬೇಕಾದರೆ ಇವರಿಗೆ ಶೇ. 51ರಷ್ಟು ಮತ ಇದೆಯಾ ಎಂದು ಯೋಚನೆ ಮಾಡಬೇಕಿತ್ತು. ಆದರೆ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಆಗುವುದಕ್ಕಿಂತ ಮುಂಚೆ ಅಥವಾ ಅನರ್ಹತೆ ಆಗೋದಕ್ಕಿಂತ ಮೊದಲು ಮುಖ್ಯಮಂತ್ರಿ ಆಗಲು ಅವಕಾಶ ಮಾಡಿಕೊಟ್ಟಿರುವುದು ಸಂವಿಧಾನ ವಿರೋಧಿ ನಿಲುವು. ಇದರಿಂದ ನಮಗೆ ನೋವಾಗಿದೆ. ಕಾನೂನು, ಪ್ರಜಾಪ್ರಭುತ್ವ, ಸಂವಿಧಾನ ಎತ್ತಿ ಹಿಡಿಯಬೇಕಾದವರೇ ಅದರ ವಿರುದ್ಧ ನಡೆದುಕೊಂಡಾಗ ಏನಾಗುತ್ತದೆ ಎಂದು ರಾಜ್ಯಪಾಲರ ವಿರುದ್ಧ ಶಾಸಕ ಟಿ.ಡಿ.ರಾಜೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ABOUT THE AUTHOR

...view details