ಕರ್ನಾಟಕ

karnataka

ETV Bharat / state

ಮಗನಿಂದಲೇ ಹೆತ್ತ ತಂದೆಯ ಹತ್ಯೆ... ಕುಡಿದ ಮತ್ತಿನಲ್ಲೇ ನಡೀತು ದುರ್ಘಟನೆ! - ಮಗನಿಂದಲೇ ಹೆತ್ತ ತಂದೆಯ ಹತ್ಯೆ

ಎಣ್ಣೆ ಏಟಲ್ಲಿ ಟೈಟಾಗಿದ್ದ ಮಗ ಒಲೆಯಲ್ಲಿ ಉರಿಯುತ್ತಿದ್ದ ಸೌದೆಯಲ್ಲಿ ಅಪ್ಪನ ಮೇಲೆ ಹಲ್ಲೆ ಮಾಡಿದ್ದಾನೆ.

son murders his father in chikmagalur
son murders his father in chikmagalur

By

Published : Sep 19, 2020, 2:56 AM IST

Updated : Sep 19, 2020, 6:25 AM IST

ಚಿಕ್ಕಮಗಳೂರು: ಅಡುಗೆ ಮಾಡುವ ಒಲೆ ಪಕ್ಕ ಮಲಗಿದ್ದ ಅಪ್ಪನನ್ನು ಹೆತ್ತ ಮಗ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಹೇಳಿದ ಕೂಡಲೇ ಎದ್ದೇಳಲಿಲ್ಲ ಎಂದು ಒಲೆಯಲ್ಲಿ ಉರಿಯುತ್ತಿದ್ದ ಸೌದೆಯಿಂದ ಹೊಡೆದು ಹೆತ್ತಪ್ಪನನ್ನ ಕೊಲೆ ಮಾಡಿದ್ದು, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಬೆಳಗೋಡು ಗ್ರಾಮದಲ್ಲಿ ನಡೆದಿದೆ.

ಕುಡಿದ ಮತ್ತಿನಲ್ಲೇ ನಡೀತು ದುರ್ಘಟನೆ

ಮೃತ ದುರ್ದೈವಿಯನ್ನ 63 ವರ್ಷದ ಬಾಸಯ್ಯ ಎಂದು ಗುರುತಿಸಲಾಗಿದೆ. ಮಂಜುನಾಥ್ (33) ಅಪ್ಪನನ್ನೇ ಕೊಲೆಗೈದ ಪುತ್ರನಾಗಿದ್ದಾನೆ. ಮೃತ ಬಾಸಯ್ಯನಿಗೆ ಇಬ್ಬರು ಪುತ್ರರಿದ್ದು, ಹಿರಿಯ ಮಗ ಮದುವೆಯಾಗಿ ಬಣಕಲ್ ಬಳಿ ಹಳ್ಳಿಯೊಂದರಲ್ಲಿ ವಾಸವಿದ್ದಾನೆ. ಕಿರಿಯ ಮಗ ಮಂಜುನಾಥ್‍ಗೆ ಇನ್ನು ಮದುವೆಯಾಗಿಲ್ಲ. ಬಾಸಯ್ಯನ ಪತ್ನಿಗೆ ಕಳೆದೊಂದು ವರ್ಷದಿಂದ ಆರೋಗ್ಯ ಸಮಸ್ಯೆ ಕಾಡುತ್ತಿದ್ದು, ಹಾಸಿಗೆ ಹಿಡಿದಿದ್ದಾರೆ. ಹಾಗಾಗಿ, ಅಪ್ಪ-ಮಗನೇ ಅಡುಗೆ ಮಾಡಿಕೊಂಡು ಊಟ ಮಾಡುತ್ತಿದ್ದರು.

ನಿನ್ನೆ ಸಂಜೆ ಇಬ್ಬರು ಕೂಲಿ ಮುಗಿಸಿಕೊಂಡು ಮನೆಗೆ ಬಂದಿದ್ದಾರೆ. ಅಪ್ಪ ಅಡುಗೆ ಮಾಡುವ ಒಲೆ ಪಕ್ಕದಲ್ಲಿ ಮಲಗಿದ್ದರು. ತಡವಾಗಿ ಮನೆಗೆ ಬಂದ ಮಗ ಅಪ್ಪನನ್ನ ಅಡುಗೆ ಮಾಡಬೇಕು ಎದ್ದೇಳು ಎಂದು ಹೇಳಿದ್ದಾನೆ. ಈ ವೇಳೆ ಅಪ್ಪ ಎದ್ದಿಲ್ಲ. ಕೂಡಲೇ ಎಣ್ಣೆ ಏಟಲ್ಲಿ ಟೈಟಾಗಿದ್ದ ಮಗ ಒಲೆಯಲ್ಲಿ ಉರಿಯುತ್ತಿದ್ದ ಸೌದೆಯಲ್ಲಿ ಅಪ್ಪನ ಮೇಲೆ ಹಲ್ಲೆ ಮಾಡಿದ್ದಾನೆ.

ಮಗನಿಂದಲೇ ಹೆತ್ತ ತಂದೆಯ ಹತ್ಯೆ

ರಾತ್ರಿ ವೇಳೆ ಊಟ ಮಾಡಿ ಅಪ್ಪ ನಿದ್ದೆ ಮಾಡಿದ್ದಾನೆ. ಆದರ ಬೆಳಗ್ಗೆ ಏಳು ಗಂಟೆಗೆ ಎದ್ದು ನೋಡಿದಾಗ ಅತನ ತಲೆಯಲ್ಲಿ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ. ಇದಾದ ಬಳಿಕ ರಾತ್ರಿ ನಡೆದ ಘಟನೆ ಬಗ್ಗೆ ಖುದ್ದಾಗಿ ಮಗ ವಿವರಣೆ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಬಣಕಲ್​ ಪೊಲೀಸರು ಆರೋಪಿ ಮಂಜುನಾಥ್​ನನ್ನ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Last Updated : Sep 19, 2020, 6:25 AM IST

ABOUT THE AUTHOR

...view details