ಚಿಕ್ಕಮಗಳೂರು: ಇಂದಿನಿಂದ ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಿದ ಹಿನ್ನೆಲೆ ನಗರದಲ್ಲಿ ಇಂದು ಹತ್ತಾರು ಮದ್ಯದಂಗಡಿಗಳು ತೆರೆದಿದ್ದು, ಮಧ್ಯಾಹ್ನದ ವೇಳೆಗೆ ಬಹುತೇಕ ಖಾಲಿ ಖಾಲಿಯಾಗಿವೆ.
ಗ್ರೀನ್ ಝೋನ್ ಚಿಕ್ಕಮಗಳೂರಿನಲ್ಲಿ ಒಂದೇ ದಿನಕ್ಕೆ ಗ್ರೀನ್ ಲೇಬಲ್ ಸೋಲ್ಡ್ ಔಟ್! - ಚಿಕ್ಕಮಗಳೂರಿ
ಚಿಕ್ಕಮಗಳೂರು ಜಿಲ್ಲೆ ಗ್ರೀನ್ ಝೋನ್ನಲ್ಲಿದ್ದು, ಒಂದೇ ದಿನಕ್ಕೆ ಗ್ರೀನ್ ಲೇಬಲ್ ಮದ್ಯ ಖಾಲಿಯಾಗಿದೆ.
![ಗ್ರೀನ್ ಝೋನ್ ಚಿಕ್ಕಮಗಳೂರಿನಲ್ಲಿ ಒಂದೇ ದಿನಕ್ಕೆ ಗ್ರೀನ್ ಲೇಬಲ್ ಸೋಲ್ಡ್ ಔಟ್! sold-out-for-a-single-day-in-chikmagalur-liquor-stores-empty](https://etvbharatimages.akamaized.net/etvbharat/prod-images/768-512-7056981-161-7056981-1588604059701.jpg)
ಚಿಕ್ಕಮಗಳೂರಿನಲ್ಲಿ ಒಂದೇ ದಿನಕ್ಕೆ ಸೋಲ್ಡ್ ಔಟ್, ಮದ್ಯದಂಗಡಿಗಳು ಖಾಲಿ ಖಾಲಿ..!
ಜಿಲ್ಲೆ ಗ್ರೀನ್ ಝೋನ್ನಲ್ಲಿದ್ದು, ಒಂದೇ ದಿನಕ್ಕೆ ಗ್ರೀನ್ ಲೇಬಲ್ ಮದ್ಯ ಖಾಲಿಯಾಗಿದೆ. ಬೆಳಗ್ಗೆಯಿಂದ ಮಧ್ಯಾಹ್ನದ ಒಳಗೆ ಸಂಪೂರ್ಣ ಖಾಲಿಯಾಗಿದೆ. ಗ್ರೀನ್ ಲೇಬಲ್ ಬ್ರ್ಯಾಂಡ್ಗೆ ಬೇಡಿಕೆ ಹೆಚ್ಚಾಗಿದ್ದು, ಮದ್ಯ ಪ್ರಿಯರು ಕುಡಿದು ಕಿಕ್ಕೇರಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಬಿಯರ್ ಸಿಗದೆ ಬಿಯರ್ ಪ್ರಿಯರು ಪರದಾಡುವಂತಾಗಿದೆ. ಬಿಯರ್ಗಾಗಿ ಹಲವಾರು ಕಡೆ ಸುತ್ತಾಟ ನಡೆಸಿದರೂ ಬಿಯರ್ ಮಾತ್ರ ಸಿಗುತ್ತಿಲ್ಲ ಎಂದು ಮದ್ಯ ಪ್ರಿಯರು ಮನೆಗೆ ತೆರಳಿದ್ದಾರೆ.