ಚಿಕ್ಕಮಗಳೂರು:ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿರುವ ಸಮಾಜ ಸೇವಕ ಸ್ನೇಕ್ ಆರೀಫ್ ಹೂವಿನ ವ್ಯಾಪಾರಿಯಾಗಿದ್ದು, ಇವರು ಈ ಬಾರಿ ಗಣೇಶ ಹಬ್ಬದಲ್ಲಿ ಹೂ ಮಾರಿ ಬಂದ ಲಾಭದಲ್ಲಿ ಕಳಸದ ದಿವ್ಯಾ ಕಾರುಣ್ಯಾಲಯ ಅನಾಥಶ್ರಮಕ್ಕೆ ಸಹಾಯ ಮಾಡಿದ್ದು, ಇವರ ಈ ಕೆಲಸಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಳಸದ ದಿವ್ಯಾ ಕಾರುಣ್ಯಾಲಯ ಅನಾಥಶ್ರಮಕ್ಕೆ ಸಹಾಯ ಮಾಡಿದ ಸಮಾಜ ಸೇವಕ ಸ್ನೇಕ್ ಆರೀಫ್ ಮೂಡಿಗೆರೆ ತಾಲೂಕಿನಲ್ಲಿರುವ ಸಮಾಜ ಸೇವಕ ಸ್ನೇಕ್ ಆರೀಫ್ ಒಬ್ಬ ಹೂವಿನ ವ್ಯಾಪಾರಿ. ಪ್ರತಿನಿತ್ಯ ಹೂ ಮಾರಿ ಜೀವನ ಮಾಡುವ ಇವರು ಗೌರಿ ಗಣೇಶ ಹಬ್ಬದದಿನ ಮಾರಿದಂತಹ ಹೂವಿನಿಂದ ಬಂದತಹ ಲಾಭದಲ್ಲಿ ಕಳಸದ ದಿವ್ಯಾ ಕಾರುಣ್ಯಾಲಯ ಅನಾಥಶ್ರಮಕ್ಕೆ ಇಂದೂ ಎರಡೂ ಕ್ವೀಂಟಾಲ್ ಅಕ್ಕಿ, ತೆಂಗಿನ ಕಾಯಿ ಹಾಗೂ 25ಕ್ಕೂ ಹೆಚ್ಚು ಜನರಿಗೆ ಬಟ್ಟೆ ನೀಡಿ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ.
ಕಳಸದಲ್ಲಿರುವ ಈ ಅನಾಥಶ್ರಮದಲ್ಲಿ ಸುಮಾರು 25ಕ್ಕೂ ಹೆಚ್ಚು ಅನಾಥರಿದ್ದು, ಮೂಡಿಗೆರೆ ತಾಲೂಕು ಹಾಗೂ ಕೊಟ್ಟಿಗೆಹಾರ, ಚಾರ್ಮಾಡಿ ಘಾಟಿಯಲ್ಲಿ ಅನಾಥರಾಗಿ ಸಿಕ್ಕಿದ್ದಂತಹ ಜನರನ್ನು ಇದೇ ಆರೀಫ್ ಈ ಅನಾಥಶ್ರಮಕ್ಕೆ ಬಿಟ್ಟು ಬರುತ್ತಿದ್ದರು. ಈಗ ಇದೇ ಅನಾಥಶ್ರಕ್ಕೆ ಸಹಾಯ ಮಾಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಜಿಲ್ಲೆಯಲ್ಲಿ ಭೂ ಕುಸಿತ ಉಂಟಾದ ಸಂದರ್ಭದಲ್ಲಿ ಮಣ್ಣಿನಡಿಯಲ್ಲಿ ಸಿಲುಕಿದ್ದ ಮೃತ ದೇಹಗಳನ್ನು ಹೊರ ತೆಗೆಯುವ ಮೂಲಕ ಸಹಾಯಹಸ್ತ ಚಾಚಿದ್ದರು. ನಿರಂತರ ಸಮಾಜ ಸೇವೆಯಿಂದ ಮೂಡಿಗೆರೆ ತಾಲೂಕಿನಲ್ಲಿ ಆರೀಫ್ ಮನೆ ಮಾತಾಗಿದ್ದಾರೆ. ಇಂದೂ ಇವರು ಮಾಡಿರುವ ಈ ಕಾರ್ಯಕ್ಕೆ ಸಾರ್ವಜನರಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.