ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು: ನಾಗರಹಾವು ಕಚ್ಚಿ ಉರಗ ತಜ್ಞ ಸ್ನೇಕ್ ನರೇಶ್ ಸಾವು - Reptile expert Snake Naresh passes away

ಉರಗ ತಜ್ಞ ಸ್ನೇಕ್‌ ನರೇಶ್‌ ಅವರು ಸ್ವತಃ ತಾವೇ ಹಿಡಿದು ಬ್ಯಾಗ್‌ನಲ್ಲಿ ಇಟ್ಟಿದ್ದ ನಾಗರಹಾವು ಕಚ್ಚಿ ಸಾವನ್ನಪ್ಪಿದ್ದಾರೆ.

snake-naresh-died-bitten-by-a-cobra-in-chikkamagaluru
ಚಿಕ್ಕಮಗಳೂರು: ನಾಗರಹಾವು ಕಚ್ಚಿ ಉರಗ ತಜ್ಞ ಸ್ನೇಕ್ ನರೇಶ್ ಸಾವು

By

Published : May 30, 2023, 7:45 PM IST

ಚಿಕ್ಕಮಗಳೂರು:ರಾಜ್ಯದ ಹೆಸರಾಂತ ಉರಗ ತಜ್ಞರಲ್ಲಿ ಒಬ್ಬರಾಗಿದ್ದ ಸ್ನೇಕ್ ನರೇಶ್ (51) ಸ್ವತಃ ತಾವೇ ಹಿಡಿದಿದ್ದ ನಾಗರ ಹಾವು ಕಚ್ಚಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿಂದು ನಡೆದಿದೆ. ಇಂದು ಬೆಳಗ್ಗೆ ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ಸಮೀಪ ನಾಗರ ಹಾವೊಂದನ್ನು ಸೆರೆ ಹಿಡಿದಿದ್ದ ನರೇಶ್ ಹಾವನ್ನು ಚೀಲದಲ್ಲಿ ತುಂಬಿ ಸ್ಕೂಟಿಯ ಡಿಕ್ಕಿಯಲ್ಲಿ ಇಟ್ಟಿದ್ದರು. ಅದಾದ ಮೇಲೆ ಮತ್ತೊಂದು ಹಾವು ಹಿಡಿಯಲು ಕರೆ ಬಂದಿತ್ತು. ಸ್ಕೂಟಿಯ ಡಿಕ್ಕಿಯಲ್ಲಿ ಇಟ್ಟಿದ್ದ ಹಾವಿನ ಚೀಲವನ್ನು ಬಿಗಿಯಾಗಿ ಕಟ್ಟಲು ಎಂದು ಸ್ಕೂಟಿಯ ಡಿಕ್ಕಿ ಓಪನ್ ಮಾಡಿದಾಗ ಚೀಲದಿಂದ ಹೊರ ಬಂದಿದ್ದ ನಾಗರಹಾವು ನರೇಶ್ ಅವರಿಗೆ ಕಚ್ಚಿದೆ.

ಕೂಡಲೇ ಈ ವಿಷಯ ತಿಳಿದ ಸ್ಥಳೀಯರು ನರೇಶ್ ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರ ದೇಹಕ್ಕೆ ನಾಗರ ಹಾವಿನ ವಿಷವೇರಿ ಮೃತಪಟ್ಟಿದ್ದರು. ಸ್ನೇಕ್ ನರೇಶ್ ಎಂದೇ ಹೆಸರು ವಾಸಿಯಾಗಿದ್ದ ಇವರು, ಸುಮಾರು 27 ವರ್ಷಗಳಿಂದ ಚಿಕ್ಕಮಗಳೂರು ಸುತ್ತ ಮುತ್ತ ಮಾತ್ರವಲ್ಲದೇ ರಾಜ್ಯದ ನಾನಾ ಭಾಗಗಳಲ್ಲಿ ಸಾವಿರಾರು ಹಾವುಗಳನ್ನು ಹಿಡಿದು ರಕ್ಷಣೆ ಮಾಡಿದ್ದಾರೆ. ಜನರ ಜೀವವನ್ನು ಕಾಪಾಡಿದ್ದಾರೆ.

ಸುಮಾರು 250 ಕ್ಕೂ ಹೆಚ್ಚು ಕಾಳಿಂಗ ಸರ್ಪಗಳನ್ನು, ಸುಮಾರು 40 ಹೆಬ್ಬಾವುಗಳನ್ನು, 20 ಸಾವಿರಕ್ಕೂ ಅಧಿಕ ಇತರ ಹಾವುಗಳನ್ನು ಹಿಡಿದು ರಕ್ಷಣೆ ಮಾಡಿದ್ದರು. ಸ್ನೇಕ್ ನರೇಶ್ ಅವರು 2013ರಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೂ ಸ್ಪರ್ಧಿಸಿದ್ದರು. ಶಾಲಾ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಹಾವುಗಳ ರಕ್ಷಣೆಯ ಮಹತ್ವದ ಬಗ್ಗೆ ಮಾಹಿತಿಯನ್ನು ಸಹ ನೀಡುತ್ತಿದ್ದರು. ಮೃತ ಸ್ನೇಕ್ ನರೇಶ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಮನೆ ಹಾಗೂ ಸುತ್ತ ಮುತ್ತಲ ಪ್ರದೇಶಗಳಲ್ಲಿ ವಿಷಕಾರಿ ಹಾವುಗಳು ಕಂಡಾಗಿ ತಕ್ಷಣ ನೆರವಿಗೆ ಬರುತ್ತಿದ್ದ ಸ್ನೇಕ್ ನರೇಶ್ ಸಾವಿಗೆ ಚಿಕ್ಕಮಗಳೂರು ನಗರದ ಜನತೆ ಕಂಬಿನಿ ಮಿಡಿಯುತ್ತಿದ್ದಾರೆ.

ಇದನ್ನೂ ಓದಿ:ಹಾವು ಕಚ್ಚಿ ಮೃತಪಟ್ಟ ಮಗುವಿನ ಶವ ಹಿಡಿದುಕೊಂಡು 10 ಕಿ.ಮೀ ನಡೆದೇ ಸಾಗಿದ ತಾಯಿ!

ಹಾವು ಕಡಿತಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾಗ ಬಾಲಕಿ ಸಾವು:ಮನೆಯಲ್ಲಿ ಮಲಗಿದ್ದ ಬಾಲಕಿಗೆ ಹಾವು ಕಚ್ಚಿದ ಪರಿಣಾಮ ಶಿವಮೊಗ್ಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಸಾವನ್ನಪ್ಪಿದ್ದ ಘಟನೆ ಕಳೆದ ವಾರ ನಡೆದಿತ್ತು. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ತಲ್ಲೂರು ಗ್ರಾಮದ ಅಕ್ಷತಾ ಹಾವು ಕಡಿತದಿಂದ ಮೃತಪಟ್ಟಿದ ಬಾಲಕಿ. ಅಕ್ಷತಾ ದ್ವಿತೀಯ ಪಿಯುಸಿ ಓದುತ್ತಿದ್ದು, ಕಳೆದ ಮೂರು ದಿನಗಳ ಹಿಂದೆ ಕಾಲೇಜಿಗೆ ಹೋಗಿ ಸಂಜೆ ಮನೆಗೆ ಬಂದಿದ್ದಳು. ಅಂದು ರಾತ್ರಿ ತಾಯಿ ಮಗಳು ಇಬ್ಬರೂ ನೆಲದ ಮೇಲೆ ಮಲಗಿದ್ದರು, ಈ ವೇಳೆ ಅಕ್ಷತಾಳಿಗೆ ಹಾವು ಕಚ್ಚಿತ್ತು. ತಕ್ಷಣ ಎಚ್ಚರಗೊಂಡ ಅಕ್ಷತ ಹಾವು, ಹಾವು ಎಂದು ಕೂಗಿ‌ಕೊಂಡಿದ್ದಳು.

ಲೈಟ್ ಹಾಕಿ ನೋಡಿದಾಗ ಮನೆಯಲ್ಲಿ ಹಾವು ಕಾಣಿಸಿಕೊಂಡಿರಲಿಲ್ಲ. ಇದರಿಂದ ಅವರು ಮತ್ತೆ ನಿದ್ದೆಗೆ ಜಾರಿದ್ದರು. ಆದರೆ, ಹಾವು ಕಚ್ಚಿದ ಬಗ್ಗೆ ಪೋಷಕರಿಗೆ ತಿಳಿಯುವಷ್ಟರಲ್ಲಿ ಅಕ್ಷತಾ ಅಸ್ವಸ್ಥಗೊಂಡಿದ್ದಳು. ತಕ್ಷಣ ಅವರು ಆನವಟ್ಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ವೈದ್ಯರು ಅಲ್ಲಿಂದ ಶಿಕಾರಿಪುರ ಆಸ್ಪತ್ರೆಗೆ ಶಿಫಾರಸು ಮಾಡಿದ್ದರು. ಶಿಕಾರಿಪುರ‌ ಆಸ್ಪತ್ರೆಯಲ್ಲಿಯು ಹಾವು ಕಡಿತಕ್ಕೆ ಚಿಕಿತ್ಸೆ ಸಿಗದೇ. ನಂತರ ಅಲ್ಲಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಶಿಫಾರಸು ಮಾಡಿದ್ದರು. ಆದರೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಳು.

ABOUT THE AUTHOR

...view details