ಕರ್ನಾಟಕ

karnataka

ETV Bharat / state

25 ಸಾವಿರಕ್ಕೂ ಹೆಚ್ಚು ಹಾವು ರಕ್ಷಿಸಿದ ಸುರೇಶ್ ಸಾವನ್ನಪ್ಪಿದ್ದು ಹೇಗೆ? ಕಂಪ್ಲೀಟ್‌ ಡಿಟೇಲ್ಸ್‌ - ಈಟಿವಿ ಭಾರತ ಕನ್ನಡ

ಹಾವು ಕಡಿತಕ್ಕೊಳಗಾಗಿ ಸ್ನೇಕ್​ ಸುರೇಶ್​ ಮೃತಪಟ್ಟಿರುವ ಘಟನೆ ಇತ್ತೀಚೆಗೆ ನಡೆದಿದ್ದು ಸಂಪೂರ್ಣ ವಿವರ ಇಲ್ಲಿದೆ.

ಉರಗತಜ್ಞ ಸುರೇಶ್
ಉರಗತಜ್ಞ ಸುರೇಶ್

By

Published : Jun 1, 2023, 10:10 AM IST

ಚಿಕ್ಕಮಗಳೂರು:ಸುಮಾರು 25 ಸಾವಿರಕ್ಕೂ ಹೆಚ್ಚು ಹಾವುಗಳನ್ನು ರಕ್ಷಣೆ ಮಾಡಿದ್ದ ಖ್ಯಾತ ಉರಗತಜ್ಞ ಸ್ನೇಕ್​ ಸುರೇಶ್​ ಸ್ವತಃ ಹಾವು ಕಡಿತದಿಂದ ಸಾವನ್ನಪ್ಪಿರುವ ಘಟನೆ ಇತ್ತೀಚೆಗೆ ನಡೆದಿದೆ. ಚಿಕ್ಕಮಗಳೂರು ನಿವಾಸಿಯಾಗಿದ್ದ ಸುರೇಶ್ ಟೈಲರ್ ವೃತ್ತಿ ಜೊತೆಗೆ ಹಾವುಗಳನ್ನು ಹಿಡಿಯುವುದನ್ನು ಉಪವೃತ್ತಿ ಮಾಡಿಕೊಂಡಿದ್ದರು. ಸಾವಿರಾರು ಹಾವುಗಳನ್ನು ಹಿಡಿದು ರಕ್ಷಿಸಿದ್ದ ಇವರು ಅದೇ ಹಾವಿನಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಘಟನೆಯ ಸಂಪೂರ್ಣ ವಿವರ:ಬೆಳಗ್ಗೆ ಹಾವು ಹಿಡಿದುಕೊಂಡು ಬಂದಿದ್ದ ನರೇಶ್, ಚೀಲವೊಂದರಲ್ಲಿ ಕಟ್ಟಿ ಬೈಕ್ ಡಿಕ್ಕಿಯಲ್ಲಿ ಇಟ್ಟಿದ್ದರು. ಮಧ್ಯಾಹ್ನ ಮನೆಯಲ್ಲಿ ಊಟಕ್ಕೆ ಕೂರುತ್ತಿದ್ದಂತೆ ಹಾವು ಕಾಣಿಸಿಕೊಂಡಿದ್ದು ರಕ್ಷಣೆ ಮಾಡುವಂತೆ ಫೋನ್ ಕೆರೆ ಬಂದಿತ್ತು. ಕೂಡಲೇ ಸ್ಕೂಟಿ ಬಳಿ ಬಂದು ಹಾವಿನ ಚೀಲವನ್ನು ಮತ್ತಷ್ಟು ಗಟ್ಟಿ ಮಾಡಲು ಸ್ಕೂಟಿ ತೆಗೆಯುತ್ತಿದ್ದಂತೆ ರಕ್ಷಣೆ ಮಾಡಿದ್ದ ನಾಗರಹಾವು ಚೀಲದೊಳಗಿನಿಂದಲೇ ಕಚ್ಚಿದೆ.

ಮನೆಯಿಂದ ಆಸ್ಪತ್ರೆಗೆ ಒಂದೂವರೆ ಕಿ.ಮೀ ಅಂತರವಿದ್ದು ಕೂಡಲೇ ಚಿಕಿತ್ಸೆಗೆಂದು ತೆರಳಿದ್ದಾರೆ. ಆಸ್ಪತ್ರೆಯಲ್ಲಿ ಇನ್ನೇನು ಚಿಕಿತ್ಸೆಗೆ ಮುಂದಾಗಬೇಕು ಅನ್ನುವಷ್ಟರಲ್ಲೇ ಅವರ ಪ್ರಾಣಪಕ್ಷಿ ಹಾರಿಹೋಗಿದೆ. ಜೀವನದುದ್ದಕ್ಕೂ ಸಾವಿರಾರು ಹಾವಿನ ಜೀವ ಉಳಿಸಿದ್ದ ಸ್ನೇಕ್ ನರೇಶ್ ಇಂದು ಅದೇ ಹಾವಿನಿಂದ ಸಾವಿಗೀಡಾಗಿದ್ದು ನಿಜಕ್ಕೂ ದುರಂತ ಸಂಗತಿ. ಹಾವುಗಳ ರಕ್ಷಣೆಯಿಂದಲೇ ಪ್ರಖ್ಯಾತಿ ಪಡೆದಿದ್ದ ಸುರೇಶ್​ 2013 ರಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಕೂಡಾ ಸ್ಪರ್ಧಿಸಿದ್ದರು.

ಸ್ನೇಕ್ ನರೇಶ್ ಬೈಕ್‌ನಲ್ಲಿ ಐದಾರು ಚಿಕ್ಕ ಚಿಕ್ಕ ಮಂಡಲದ ಹಾವುಗಳು ಒಂದು ನಾಗರ ಹಾವು ಇತ್ತು. ಅವರ ಕಾರಿನಲ್ಲಿ 25 ಕ್ಕೂ ಹೆಚ್ಚು ಹಾವುಗಳು ಇದ್ದು ಎಲ್ಲವನ್ನೂ ಚೀಲದಲ್ಲಿ ಕಟ್ಟಿ-ಕಟ್ಟಿ ಕಾರಿನ ಡಿಕ್ಕಿ ಸೀಟ್ ಬಳಿ ಇಟ್ಟಿದ್ದರು. ಮನೆಯೊಳಗಿನ ಡ್ರಮ್‍ನಲ್ಲಿ 50 ಕ್ಕೂ ಹೆಚ್ಚು ಹಾವುಗಳನ್ನು ಇಟ್ಟಿದ್ದರು. ಇಷ್ಟೆಲ್ಲ ಹಾವುಗಳನ್ನು ರಕ್ಷಣೆ ಮಾಡಿ ಕಾರು, ಬೈಕ್​, ಮನೆಯಲ್ಲಿ ಏಕೆ ಇಟ್ಟಿದ್ದರು ಎಂಬ ಪ್ರಶ್ನೆಗಳು ಕೇಳಿ ಬಂದಿವೆ.

ಉರಗತಜ್ಞ ಸ್ನೇಕ್ ಆರೀಫ್ ಪ್ರತಿಕ್ರಿಯೆ ನೀಡಿ, ಮೂರು ದಶಕಗಳಿಂದ ಕಾಳಿಂಗ ಸರ್ಪ ಸೇರಿದಂತೆ ಹತ್ತಾರು ಕೆಟ್ಟ ವಿಷಕಾರಿ ಹಾವುಗಳನ್ನು ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದ ಸ್ನೇಕ್ ನರೇಶ್ ಇಂದು ನಾಗರಹಾವಿಗೆ ಬಲಿಯಾಗಿದ್ದಾರೆ. ಇದು ನಿಜಕ್ಕೂ ದುರಂತ. ಹಾವು ಕಡಿದ ತಕ್ಷಣ ಆಸ್ಪತ್ರೆಗೆ ಬಂದಿದ್ದರೆ ಬಹುಶಃ ಬದುಕುತ್ತಿದ್ದರೋ ಏನೋ. ಆದ್ರೆ ಅವರಿಗೆ ಕಚ್ಚಿರುವುದು ಅರ್ಧ ಘಳಿಗೆಯ ಹಾವು. ಈ ಹಾವು ಕಚ್ಚಿದ ಅರ್ಧ ಗಂಟೆಯೊಳಗೆ ಚಿಕಿತ್ಸೆ ಪಡೆದರೆ ಬದುಕುತ್ತಾರೆ ಎಂದು ಹೇಳಿದರು.

ಕಾಫಿನಾಡಲ್ಲಿ ಹಾವಿನ ಕಡಿತದಿಂದ ಉರಗ ತಜ್ಞ ಸಾವನ್ನಪ್ಪಿದ ಎರಡನೇ ಪ್ರಕರಣ ಇದು. 2016 ರಲ್ಲಿ ಕಳಸದಲ್ಲಿ ಪ್ರಫುಲ್ ಭಟ್ ಕೂಡ ಕಾಳಿಂಗ ಸರ್ಪ ಸೆರೆ ಹಿಡಿದು ಚೀಲಕ್ಕೆ ಹಾಕಿ ಕೈ ಹೊರ ತೆಗೆಯುವಾಗ ಕಚ್ಚಿ ಸಾವನ್ನಪ್ಪಿದ್ದರು. ಆದರೆ ಸುರೇಶ್​ ಅವರ ಪ್ರಕರಣದಲ್ಲಿ ಚೀಲದ ಬಾಯಿ ತೆರೆದಿರದಿದ್ದರೂ ಚೀಲ ಸಮೇತ ಹಾವು ಕಚ್ಚಿದ ಪರಿಣಾಮ ನರೇಶ್ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:ಚಿಕ್ಕಮಗಳೂರು: ನಾಗರಹಾವು ಕಚ್ಚಿ ಉರಗ ತಜ್ಞ ಸ್ನೇಕ್ ನರೇಶ್ ಸಾವು

ABOUT THE AUTHOR

...view details