ಕರ್ನಾಟಕ

karnataka

ETV Bharat / state

ಕ್ಯಾಶ್​ಕೌಂಟರ್​ ಕೆಳಗೆ ಬುಸ್​ ಬುಸ್​.. ಬಗ್ಗಿ ನೋಡಿದ ಮಾಲೀಕನಿಗೆ ಶಾಕ್​ - ನಾಗರಹಾವು ರಕ್ಷಣೆ

ಮೂಡಿಗೆರೆ ತಾಲೂಕಿನ ಬಣಕಲ್​​ನ ಮತ್ತಿಗಟ್ಟೆ ರಸ್ತೆಯಲ್ಲಿರುವ ಜ್ಯುವೆಲರ್ಸ್​ ಮಳಿಗೆಯಲ್ಲಿ ನಾಗರಹಾವೊಂದನ್ನು ಸೆರೆ ಹಿಡಿಯಲಾಗಿದೆ.

Snake appear in jewellery shop
ಕ್ಯಾಶ್​ಕೌಂಟರ್​ ಕೆಳಗೆ ಕಾಣಿಸಿಕೊಂಡ ನಾಗರಹಾವು

By

Published : Dec 2, 2019, 4:30 PM IST

ಚಿಕ್ಕಮಗಳೂರು:ಮಳಿಗೆಯೊಂದರಲ್ಲಿ ನಾಗರಹಾವು ಎಲ್ಲಿ ಅಡಗಿತ್ತು ಎಂಬುದನ್ನು ಕೇಳಿದರೆ ನೀವು ಕೂಡ ಬೆಚ್ಚಿ ಬೀಳೋದು ಗ್ಯಾರಂಟಿ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್​​ನ ಮತ್ತಿಗಟ್ಟೆ ರಸ್ತೆಯಲ್ಲಿರುವ ದುರ್ಗಾಂಬಿಕ ಜ್ಯುವೆಲರ್ಸ್ ವರ್ಕ್ಸ್​​ ಕ್ಯಾಶ್​ಕೌಂಟರ್ ಕೆಳಗೆ ಈ ನಾಗರಹಾವು ಮಲಗಿತ್ತು.

ನಾಗರಹಾವು

ಮಾಲೀಕ ಮಳಿಗೆ ತೆರೆದು ಕೌಂಟರ್​​ನಲ್ಲಿ ಕುಳಿತುಕೊಂಡಿದ್ದಾರೆ. ಬಳಿಕ ಕೌಂಟರ್​ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಹಾವನ್ನು ಕಂಡು ಬೆಚ್ಚಿಬಿದ್ದ ಅವರು ಅಂಗಡಿಯಿಂದ ಹೊರಗೋಡಿ ಬಂದರು.

ಬಳಿಕ ಉರಗ ತಜ್ಞ ಆರೀಫ್​​​ ಅವರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಆರೀಫ್​ ಬಂದು 20 ನಿಮಿಷ ಕಾರ್ಯಾಚರಣೆ ನಡೆಸಿ ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.

ABOUT THE AUTHOR

...view details