ಚಿಕ್ಕಮಗಳೂರು : ಜಿಲ್ಲೆಯ ಯುವಕನೊಬ್ಬ ಸ್ಮಾರ್ಟ್ ಸ್ಟೆತಸ್ಕೋಪ್ ಹುಟ್ಟು ಹಾಕಿ, ವೈದ್ಯಕೀಯ ಲೋಕದಲ್ಲಿ ಮಹಾ ಆವಿಷ್ಕಾರಕ್ಕೆ ನಾಂದಿ ಹಾಡಿದ್ದಾರೆ.
ಈ ಆವಿಷ್ಕಾರದಿಂದ ಕೊರೊನಾ ಸೊಂಕಿತರ ಪರೀಕ್ಷೆ ಈಗ ಇನ್ನಷ್ಟು ಸುಲಭ ಆಗಲಿದ್ದು, ವೈದ್ಯರು ಕುಳಿತಲ್ಲಿಯೇ ಎಲ್ಲೋ ಇರುವ ರೋಗಿಗಳ ಪರೀಕ್ಷೆ ಮಾಡಬಹುದಾಗಿದೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಯುವಕ ಆದರ್ಶ್ ಈ ಸಾಧನೆ ಮಾಡಿರುವ ವ್ಯಕ್ತಿ .
ಮೊಬೈಲ್, ಲ್ಯಾಪ್ಟಾಪ್ ಮೂಲಕ, ರೋಗಿಗಳ ಹೃದಯಬಡಿತ, ಉಸಿರಾಟ ಪರೀಕ್ಷೆ ನಡೆಸಬಹುದಾಗಿದೆ. ಕೊರೊನಾ ವಿರುದ್ಧ ಹೋರಾಡಲು ಇದು ಹೊಸ ಅಸ್ತ್ರ ವಾಗಿದ್ದು, ಸ್ಮಾರ್ಟ್ ಸ್ಟೆತಸ್ಕೋಪ್ ಬ್ಲೂಟೂತ್ ಸಹಾಯದಿಂದ ಕುಳಿತಲ್ಲೇ ತಪಾಸಣೆ ಮಾಡಬಹುದಾಗಿದೆ.
ಕೊರೊನಾ ರೋಗಿಯ ಬಳಿ ಸುಳಿಯದೇ ರೋಗದ ಲಕ್ಷಣ ಗ್ರಹಿಕೆ ಮಾಡಬಹುದು ಎಂದೂ ಹೇಳಲಾಗುತ್ತಿದ್ದು, ಮುಂಬೈನ ಐಐಟಿ ಲ್ಯಾಬ್ ರಿಸರ್ಚರ್ ಆಗಿ ಕೆಲಸ ನಿರ್ವಹಿಸುತ್ತಿರುವ ಆದರ್ಶ ಈ ಸಾಧನೆ ಮಾಡಿದ್ದಾರೆ.