ಚಿಕ್ಕಮಗಳೂರು: ಜಿಲ್ಲೆಯ ಮುತ್ತೋಡಿ ಅರಣ್ಯದ ಆಸುಪಾಸಿನ ಗಾಳಿಗುಡ್ಡೆ ಗ್ರಾಮದ ಯುವತಿ ಸಿರಿ ಎಂಬುವರು, ಕೊರೊನಾ ಕಾಲಿಟ್ಟಾಗಿನಿಂದ ಹಳ್ಳಿಯನ್ನು ತೊರೆದು ಅಪ್ಪ-ಅಮ್ಮನ ಜೊತೆ ಚಿಕ್ಕಮಗಳೂರಲ್ಲಿ ಮನೆ ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣ ನೆಟ್ವರ್ಕ್ ಸಮಸ್ಯೆ.
ನೆಟ್ವರ್ಕ್ ಸಮಸ್ಯೆ ಎಂದು ಹಳ್ಳಿಯನ್ನೇ ತೊರೆದ ಸಿರಿ: ಇದೇನಾ ಡಿಜಿಟಲ್ ಇಂಡಿಯಾ? - Siri leaves village because of network problem
ಚಿಕ್ಕಮಗಳೂರು ತಾಲೂಕಿನ ಗಾಳಿಗುಡ್ಡೆ ಗ್ರಾಮದ ವಿದ್ಯಾರ್ಥಿ ಸಿರಿ ಎಂಬುವವರು ಹಳ್ಳಿಯಲ್ಲಿ ಸರಿಯಾದ ನೆಟ್ವರ್ಕ್ ಇಲ್ಲವೆಂದು, ತಮ್ಮ ಅಪ್ಪ ಅಮ್ಮನೊಂದಿಗೆ ಸಿಟಿಗೆ ಬಂದು ವಾಸ ಮಾಡುತ್ತಿದ್ದಾರೆ.
ಹೌದು, ಇವರು ಮೈಸೂರಿನಲ್ಲಿ ಫೈನಲ್ ಇಯರ್ ಓದುತ್ತಿದ್ದು, ನೆಟ್ವರ್ಕ್ ಸಮಸ್ಯೆಯಿಂದ ಆನ್‍ಲೈನ್ ಕ್ಲಾಸ್ ಕೇಳಲು ಆಗುತ್ತಿರಲಿಲ್ಲ. ಇತ್ತ ಹಳ್ಳಿಯಲ್ಲಿ ಬೇಸಿಕ್ ಮೊಬೈಲ್‍ಗೂ ನೆಟ್ವರ್ಕ್ ಇಲ್ಲ. ಇದರಿಂದ ಓದಿಗೆ ತೊಂದರೆಯಾಗುತ್ತದೆ ಎಂದು ಸಿರಿ ತಮ್ಮ ಅಪ್ಪ ಅಮ್ಮನೊಂದಿಗೆ ಹಳ್ಳಿಯನ್ನು ತೊರೆದು ಸಿಟಿಗೆ ಬಂದಿದ್ದಾರೆ.
ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಇಂತಹ ಸಾವಿರಾರು ಹಳ್ಳಿಗಳಿವೆ. ಅವುಗಳಿಗೆ ಸರಿಯಾದ ರಸ್ತೆ, ಕರೆಂಟ್ ಕೂಡ ಇಲ್ಲ. ಅವರಿಗೆ ಮೂಲಭೂತ ಸೌಕರ್ಯಗಳಂತೂ ಮರೀಚಿಕೆಯಾಗಿದೆ. ಇದರ ಮಧ್ಯೆ ನೆಟ್ವರ್ಕ್ ಅಂತೂ ಕೇಳೋದೇ ಬೇಡ. ಹಾಗಾಗಿ ಮಲೆನಾಡಿಗರು ಹಳ್ಳಿ ಬಿಟ್ಟು ನಗರಗಳತ್ತ ಮುಖ ಮಾಡುತ್ತಿದ್ದಾರೆ. ಇನ್ನಾದರೂ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಇಂತಹ ಸಮಸ್ಯೆಗಳನ್ನು ಬಗೆ ಹರಿಸಿದರೇ, ಇಂತಹ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.