ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸರಳ ಸ್ವಾತಂತ್ರ್ಯೋತ್ಸವ - balehonnuru shrigalu

ಚಿಕ್ಕಮಗಳೂರು ಜಿಲ್ಲೆಯ ಸುಭಾಷ್ ಚಂದ್ರ ಬೋಸ್ ಮೈದಾನದಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ 73 ನೇ ಧ್ವಜಾರೋಹಣ ನೇರೆವೇರಿಸಿದ್ದು ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಈ ಭಾಗವಹಿಸಿದ್ದರು.

ಜಿಲ್ಲೆಯಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.

By

Published : Aug 15, 2019, 1:37 PM IST

ಚಿಕ್ಕಮಗಳೂರು: ಜಿಲ್ಲೆಯಲ್ಲಿ 73 ನೇ ಸಾತ್ರಂತ್ಯ ದಿನವನ್ನು ಸರಳವಾಗಿ ಆಚರಣೆ ಮಾಡಲಾಯಿತು. ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಮೈದಾನದಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ 73 ನೇ ಧ್ವಜಾರೋಹಣ ನೇರೆವೇರಿಸಿದ್ದು, ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಈ ಭಾಗವಹಿಸಿದ್ದರು.

ಜಿಲ್ಲೆಯಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.

ಜಿಲ್ಲಾಧಿಕಾರಿಗಳು ಪೆರೇಡ್ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದ ನಂತರ ವಿದ್ಯಾರ್ಥಿಗಳು, ಮಾಜಿ ಸೈನಿಕರು, ಪೊಲೀಸರು,ಅರಣ್ಯ ಇಲಾಖೆಯ ಸಿಬ್ಬಂದಿ, ಅಂಧ ಮಕ್ಕಳು ಪೇರೇಡ್ ನಡೆಸಿದರು. ಈ ಕಾರ್ಯಕ್ರಮದಲ್ಲಿ ಉಪ ಸಭಾಪತಿ ಎಸ್ ಎಲ್ ಧರ್ಮೇಗೌಡ, ಶಾಸಕ ಸಿ ಟಿ ರವಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಬಾಳೆಹೊನ್ನೂರು ಮಠ:ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ರಂಭಾಪುರಿ ಶ್ರೀಗಳ ನೇತೃತ್ವದಲ್ಲಿ ಸ್ವಾತಂತ್ರ್ಯ ದಿನವನ್ನ ಆಚರಣೆ ಮಾಡಲಾಯಿತು. ರಂಭಾಪುರಿ ಶ್ರೀಗಳು ಧ್ವಜಾರೋಹಣ ನೆರೆವೇರಿಸಿದರು. ನಂತರ ಮಾತನಾಡಿದ ಅವರು, ದೇಶಾದ್ಯಂತ 73 ನೇ ಸ್ವಾತಂತ್ರ್ಯ ದಿನ ನಡೆಯುತ್ತಿದ್ದು ಸ್ವಾತಂತ್ರ್ಯಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಬಲಿದಾನವಾಗಿದೆ. ಆದರೆ, ಅದು ಸ್ವೇಚ್ಛಾಚಾರ ಅಲ್ಲ. ದೇಶದ ಮುಕುಟ ಮಣಿ ಜಮ್ಮು ಕಾಶ್ಮೀರದಲ್ಲಿ ಮೊಟ್ಟ ಮೊದಲಿಗೆ ತ್ರಿವರ್ಣ ಧ್ವಜ ಹಾರುತ್ತಿರುವುದು ಮೋದಿ ಸಂಪುಟದ ಸ್ವಷ್ಟ ನಿರ್ಧಾರ. ದೇಶಕ್ಕೆ ಒಂದೇ ಸಂವಿಧಾನ, ಇದು ದೇಶಾವಾಸಿಗಳಿಗೆ ಸಂತೋಷ ತಂದಿದೆ ಎಂದರು.

ABOUT THE AUTHOR

...view details