ಚಿಕ್ಕಮಗಳೂರು: ಕಾಫಿ ಡೇ ಮಾಲೀಕ ದಿ. ಸಿದ್ದಾರ್ಥ್ ಹೆಗ್ಡೆ, ಅವರ ಧರ್ಮಪತ್ನಿ ಮಾಳವಿಕಾ ಅವರಿಗೆ ಮೂಡಿಗೆರೆಯ ಜೆ ಎಂ ಎಫ್ ಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಚೆಕ್ಬೌನ್ಸ್ ಪ್ರಕರಣ: ಸಿದ್ದಾರ್ಥ್ ಪತ್ನಿಗೆ ಜಾಮೀನು ಮಂಜೂರು - Siddharth's wife got Bail
ಮಾಳವಿಕ ಸಿದ್ದಾರ್ಥ ಹೆಗ್ಡೆ ಸೇರಿದಂತೆ ಕಂಪನಿಯ 6 ನಿರ್ದೇಶಕರು ಮೂಡಿಗೆರೆಯ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದುಕೊಂಡಿದ್ದಾರೆ.
ಕಾಫಿ ಬೆಳೆಗಾರ ನಂದೀಶ್ ಎಂಬುವವರು ಎ ಬಿ ಸಿ ಕಂಪನಿಯವರು ನೀಡಿದಂತಹ ಚೆಕ್ ಬೌನ್ಸ್ ಆಗಿದೆ ಎಂದು ಈ ಹಿಂದೆ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಹಿನ್ನೆಲೆ ಮಾಳವಿಕಾ ಸಿದ್ಧಾರ್ಥ್ ಸೇರಿದಂತೆ 08 ಜನರಿಗೆ ಮೂಡಿಗೆರೆಯ ಜೆಎಂಎಫ್ಸಿ ನ್ಯಾಯಾಲಯ ವಾರಂಟ್ ಜಾರಿ ಮಾಡಿತ್ತು. ಕೊರೊನಾ ಕಾರಣದಿಂದ ಎಬಿಸಿ ಕಂಪನಿಯ ಯಾವುದೇ ನಿರ್ದೇಶಕರುಗಳು ಈ ಹಿಂದೆ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಮೂಡಿಗೆರೆಯ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿತ್ತು, ಇದೀಗ ಮಾಳವಿಕ ಸಿದ್ದಾರ್ಥ ಹೆಗ್ಡೆ ಸೇರಿದಂತೆ ಕಂಪನಿಯ 06 ನಿರ್ದೇಶಕರು ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದುಕೊಂಡಿದ್ದಾರೆ.
300 ಕ್ಕೂ ಹೆಚ್ಚು ಕಾಫಿ ಬೆಳೆಗಾರರಿಗೆ 100 ಕೋಟಿಗೂ ಅಧಿಕ ಬಾಕಿಯನ್ನು ಎಬಿಸಿ ಕಂಪನಿ ಉಳಿಸಿಕೊಂಡಿತ್ತು. ಈ ಕುರಿತು ಕೆಲ ಕಾಫಿ ಬೆಳೆಗಾರರು ಮೂಡಿಗೆರೆ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು.