ಚಿಕ್ಕಮಗಳೂರು: ಕಾಫಿ ಸಾಮ್ರಾಟ್ ದಿವಂಗತ ಸಿದ್ದಾರ್ಥ್ ಹೆಗ್ಡೆ ಅವರ ನೆನಪಿಗಾಗಿ ಪುತ್ಥಳಿ ನಿರ್ಮಾಣ ಮಾಡಲಾಗಿದ್ದು, ಅವರ ಅಭಿಮಾನಿ ಬಳಗ ಇಂದು ಪುತ್ಥಳಿ ಲೋಕಾರ್ಪಣೆ ಮಾಡಲಿದೆ.
ಇಂದು ಕಾಫಿ ಸಾಮ್ರಾಟ್ ಸಿದ್ದಾರ್ಥ್ ಹೆಗ್ಡೆ ಪುತ್ಥಳಿ ಲೋಕಾರ್ಪಣೆ - ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುದುರೆಗುಂಡಿ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುದುರೆಗುಂಡಿ ಸಮೀಪದ ಕಾಫಿ ತೋಟದ ಸಮೀಪ ಸಿದ್ದಾರ್ಥ್ ಹೆಗ್ಡೆ ಅವರ ಪುತ್ಥಳಿ ನಿರ್ಮಾಣ ಮಾಡಲಾಗಿದ್ದು, ಇಂದು ಪುತ್ಥಳಿ ಲೋಕಾರ್ಪಣೆಗೊಳ್ಳಲಿದೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುದುರೆಗುಂಡಿ ಸಮೀಪದ ಕಾಫಿ ತೋಟದ ಸಮೀಪ ಸಿದ್ದಾರ್ಥ್ ಹೆಗ್ಡೆ ಅವರ ಪುತ್ಥಳಿ ನಿರ್ಮಾಣ ಮಾಡಲಾಗಿದೆ. ಸಿದ್ದಾರ್ಥ್ ಹೆಗ್ಡೆ ವನ ಕೂಡ ಇವರ ಅಭಿಮಾನಿ ಬಳಗದ ವತಿಯಿಂದ ನಿರ್ಮಾಣ ಮಾಡಿದ್ದು, ಇದನ್ನು ಕೂಡ ಇಂದು ಉದ್ಘಾಟನೆ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ರಾಜ್ಯದ ಅನೇಕ ಗಣ್ಯರು ಆಗಮಿಸಲಿದ್ದು, ವಿವಿಧ ಮಠದ ಶ್ರೀಗಳು ಕೂಡ ಭಾಗವಹಿಸಲಿದ್ದಾರೆ.
ಸಾರ್ವಜನಿಕರ ಮನಸ್ಸಿನಲ್ಲಿ ಸಿದ್ದಾರ್ಥ್ ಹೆಗ್ಡೆ ಅವರು ಸದಾ ನೆನಪಿನಲ್ಲಿ ಇರಬೇಕು ಮತ್ತು ಅವರು ಸಾರ್ವಜನಿಕರಿಗೆ ಹಾಗೂ ಬಡವರಿಗೆ ಮಾಡಿರುವ ಸಹಾಯದ ಹಿನ್ನೆಲೆ ಸಿದ್ದಾರ್ಥ್ ಹೆಗ್ಡೆ ಪುತ್ಥಳಿ ನಿರ್ಮಾಣ ಮಾಡಲಾಗಿದೆ.