ಕರ್ನಾಟಕ

karnataka

ETV Bharat / state

ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಶೃಂಗೇರಿ ತಹಸೀಲ್ದಾರ್​, ಗ್ರಾಮ ಲೆಕ್ಕಾಧಿಕಾರಿ - ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಬಲೆಗೆ ಅಧಿಕಾರಿಗಳು

ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪ, ತಹಸೀಲ್ದಾರ್​ ಅಂಬುಜಾ ಎಸಿಬಿ ಬಲೆಗೆ ಬಿದ್ದವರು. ಶೃಂಗೇರಿ ತಾಲೂಕಿನ ಕಾವಡಿ ಗ್ರಾಮದ ಸಂಜಯ್ ಕುಮಾರ್ ಎಂಬುವವರ ಮನೆಯ ಹಕ್ಕು ಪತ್ರ ಮಾಡಿಸಿಕೊಡಲು ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪ ಮತ್ತು ತಹಸೀಲ್ದಾರ್​ ಅಂಬುಜಾ ಅವರು 60 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು.

acb
ಎಸಿಬಿ

By

Published : Jan 6, 2022, 10:11 PM IST

ಚಿಕ್ಕಮಗಳೂರು:ಮನೆಯ ಹಕ್ಕು ಪತ್ರ ನೀಡಲು ಲಂಚ ಪಡೆಯುತ್ತಿದ್ದ ತಹಸೀಲ್ದಾರ್​ ಮತ್ತು ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪ, ತಹಸೀಲ್ದಾರ್​ ಅಂಬುಜಾ ಎಸಿಬಿ ಬಲೆಗೆ ಬಿದ್ದವರು. ಶೃಂಗೇರಿ ತಾಲೂಕಿನ ಕಾವಡಿ ಗ್ರಾಮದ ಸಂಜಯ್ ಕುಮಾರ್ ಎಂಬುವವರ ಮನೆಯ ಹಕ್ಕು ಪತ್ರ ಮಾಡಿಸಿಕೊಡಲು ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪ ಮತ್ತು ತಹಸೀಲ್ದಾರ್​ ಅಂಬುಜಾ ಅವರು 60 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು.

ಈ ಬಗ್ಗೆ ಸಂಜಯ್​ಕುಮಾರ್​ ಎಸಿಬಿಗೆ ದೂರು ನೀಡಿದ್ದರು. ಎಸಿಬಿ ಅಧಿಕಾರಿಗಳಾದ ಡಿವೈಎಸ್​ಪಿ ಗೀತಾ, ಇನ್​ಸ್ಪೆಕ್ಟರ್ ಮಂಜುನಾಥ್, ರಾಥೋಡ್ ನೇತೃತ್ವದಲ್ಲಿ ದಾಳಿ ಯೋಜನೆ ರೂಪಿಸಲಾಗಿತ್ತು. ಶೃಂಗೇರಿಯ ಐಬಿಯಲ್ಲಿದ್ದ ಇಬ್ಬರು ಅಧಿಕಾರಿಗಳು ಸಂಜಯ್​ಕುಮಾರ್​ನಿಂದ 30 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು ಇಬ್ಬರನ್ನೂ ರೆಡ್​ಹ್ಯಾಂಡಾಗಿ ಹಿಡಿದಿದ್ದಾರೆ.

ಈ ವೇಳೆ ತಹಸೀಲ್ದಾರ್​ ಅಂಬುಜಾ ಅವರನ್ನು ವಶಕ್ಕೆ ಪಡೆದು ಕರೆದೊಯ್ಯುವಾಗ ಅಧಿಕಾರಿಯ ಕಡೆಯವರು ದೊಡ್ಡ ಹೈಡ್ರಾಮಾ ಸೃಷ್ಟಿಸಿದ್ದಾರೆ. ಅಂಬುಜಾರನ್ನು ಕರೆದೊಯ್ಯದಂತೆ ತಡೆಯೊಡ್ಡಿದ್ದರು. ಪ್ರಯಾಸದ ಬಳಿಕ ತಹಸೀಲ್ದಾರ್​ ಅಂಬುಜಾ ಮತ್ತು ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:ತಮಿಳು ನಟಿ, ನಿರೂಪಕಿ ಲಕ್ಷ್ಮಿ ಮಂಚುಗೆ ಕೋವಿಡ್ ಸೋಂಕು

For All Latest Updates

ABOUT THE AUTHOR

...view details