ಚಿಕ್ಕಮಗಳೂರು:ಕೋಮುವಾದ, ಜಾತಿ ರಾಜಕಾರಣ ಪ್ರಚೋದನೆ ಮಾಡಿದವರು ಸಿದ್ದರಾಮಯ್ಯ. ಅವರಿಂದ ಮೋದಿ ಮತ್ತು ಯಡಿಯೂರಪ್ಪ ಪಾಠ ಕಲಿಯಬೇಕಿಲ್ಲ ಎಂದು ಸಂಸದೆ ಶೋಭ ಕರಂದ್ಲಾಜೆ ಕಿಡಿಕಾರಿದ್ದಾರೆ.
ಸಿದ್ದರಾಮಯ್ಯರಿಂದ ಮೋದಿ, ಶಾ ಪಾಠ ಕಲಿಯಬೇಕಿಲ್ಲ: ಶೋಭ ಕರಂದ್ಲಾಜೆ - ಕೋಮುವಾದ, ಜಾತಿ ರಾಜಕಾರಣ ಪ್ರಚೋದನೆ ಮಾಡಿದವರು ಸಿದ್ದರಾಮಯ್ಯ ಎಂದು ಶೋಭಾ ಕರಂದ್ಲಾಜೆ ಆರೋಪ
ಕೋಮುವಾದ, ಜಾತಿ ರಾಜಕಾರಣ ಪ್ರಚೋದನೆ ಮಾಡಿದವರು ಸಿದ್ದರಾಮಯ್ಯ. ಅವರಿಂದ ಮೋದಿ ಮತ್ತು ಯಡಿಯೂರಪ್ಪ ಪಾಠ ಕಲಿಯಬೇಕಿಲ್ಲ ಎಂದು ಸಂಸದೆ ಶೋಭ ಕರಂದ್ಲಾಜೆ ಕಿಡಿಕಾರಿದ್ದಾರೆ.
ಜಿಲ್ಲೆಯ ಕಡೂರಿನಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಪ್ರವಾಸದಲ್ಲಿದ್ದು, ದೇಶದ ಅತ್ಯಂತ ಭರವಸೆಯ ರೈತರ ಕೃಷಿಕರ ಯೋಜನೆಯನ್ನು ರಾಜ್ಯದಲ್ಲಿ ವಿತರಿಸಿದ್ದಾರೆ. ಕಾಂಗ್ರೆಸ್ 50 ವರ್ಷ ಆಡಳಿತ ಮಾಡಿ ಭ್ರಷ್ಟಾಚಾರದ ಕೂಪ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ತೆಗೆದುಕೊಂಡ ತಪ್ಪು ನಿರ್ಧಾರಗಳನ್ನು ಸರಿ ಮಾಡುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದ ಅವರು, ಅನವಶ್ಯಕವಾಗಿ ಸಿದ್ದರಾಮಯ್ಯ ಗೊಂದಲ ಸೃಷ್ಟಿ ಮಾಡುತ್ತಿದ್ದು, ಕೇಂದ್ರ ಸರ್ಕಾರಕ್ಕೆ ಅವಮಾನ ಮಾಡುವ ಕೆಲಸವನ್ನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರಿಂದ ಬಿಜೆಪಿ ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಕುಮಾರಸ್ವಾಮಿ ಅವರು ಸರ್ಕಾರವನ್ನು ಯಡ್ಡಿಯೂರಪ್ಪ ಅವರ ಕೈಗೆ ಕೊಟ್ಟು ಹೋಗುವಾಗ ಸಾಲಗಾರ ರಾಜ್ಯವನ್ನಾಗಿ ಮಾಡಿ ಹೋಗಿದೆ.ಅದರ ಸಾಲ ಹಾಗೂ ಅಸಲು ತೀರಿಸುವ ಕೆಲಸ ರಾಜ್ಯ ಸರ್ಕಾರಕ್ಕೆ ಇದೀಗ ಸವಾಲಾಗಿದೆ.ಯಡ್ಡಿಯೂರಪ್ಪನವರು ಸಾರ್ವಜನಿಕ ಸಭೆಯಲ್ಲಿ ರಾಜ್ಯದ ಸಮಸ್ಯೆ ಬಗ್ಗೆ ಮೋದಿ ಅವರಿಗೆ ಹೇಳಿದ್ದಾರೆ.ಮುಖ್ಯವಾಗಿ ನೆರೆ ಬಿದ್ದ ಜಾಗದಲ್ಲಿ ಅಭಿವೃದ್ದಿ ಆಗಬೇಕಿದೆ ಎಂದರು.