ಚಿಕ್ಕಮಗಳೂರು :ನಾವು ತಾಲಿಬಾನ್ಗೆ ಸೇರಿದವರಲ್ಲ, ಐಎಸ್ಐಎಸ್ನವರು ಸಿರಿಯಾದಲ್ಲಿ ಮಾತ್ರ ಇಲ್ಲ. ಅವರು ಮಂಗಳೂರಿನಂತಹ ಕರಾವಳಿ ಜಿಲ್ಲೆಗಳಿಗೂ ಕಾಲಿಡುತ್ತಿದ್ದಾರೆ ಎಂಬುದಕ್ಕೆ ಮಂಗಳೂರಿನಲ್ಲಿ ಕಾಣಿಸಿಕೊಂಡಿರುವ ಗೋಡೆ ಬರಹವೇ ಸಾಕ್ಷಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಪ್ರವಾದಿಗೆ ಕೋಪ ಬಂದರೆ ಒಂದೇ ಶಿಕ್ಷೆ, ತಲೆ ದೇಹದಿಂದ ಬೇರ್ಪಡುವುದು ಎಂದು ಬರೆಯಲಾಗಿದೆ. ಇದು ತಾಲಿಬಾನಿಗಳ ವಾದ. ಇದು ಅವರ ವಿಚಾರ ಹಾಗೂ ಅವರ ಯೋಚನೆ. ಈಗ ಇಂತಹ ವಿಚಾರ ನಮ್ಮ ರಾಜ್ಯಕ್ಕೆ ಬರುತ್ತಿದೆ. ಈ ರೀತಿ ಬರೆಯುವ ಮೂಲಕ ಭಯವನ್ನು ಹುಟ್ಟಿಸುವ ವಾತಾವರಣ ಆಗುತ್ತಿದೆ ಎಂದರು.
ಇದನ್ನೂ ಓದಿ : ಕಾಶ್ಮೀರ-ಪಾಕಿಸ್ತಾನ ಉಗ್ರರು ಮಂಗಳೂರಿಗೆ ಬಂದಿರುವ ಶಂಕೆ ಕಾಡುತ್ತಿದೆ: ಶೋಭಾ ಕರಂದ್ಲಾಜೆ
ಈಗಾಗಲೇ ನಾನು ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡಿದ್ದೇನೆ. ಆ ಬರಹದ ಹಿಂದಿರುವ ಶಕ್ತಿಯನ್ನು ಪತ್ತೆ ಮಾಡಬೇಕು. ಬರಹ ಬರೆದಿರುವವರು ಒಂದು ಭಾಗ. ಯಾರು ಈ ರೀತಿಯ ಬರಹ ಬರೆಯಲು ಸಾಧ್ಯ ಎಂಬುದರ ಬಗ್ಗೆ ಎಂಬುದರ ಬಗ್ಗೆ ತನಿಖೆ ಆಗಬೇಕು. ತಲೆ ಕಡಿಯೋದಕ್ಕೆ ಇದು ಭಾರತ ಎಂಬ ಎಚ್ಚರಿಕೆಯನ್ನು ಅವರಿಗೆ ಈ ಮೂಲಕ ನೀಡಬೇಕು ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗೃಹ ಇಲಾಖೆ ಈ ಕೃತ್ಯ ಎಸಗಿದ ಅಪರಾಧಿಗಳನ್ನು ಪತ್ತೆ ಮಾಡಬೇಕು. ಅವರಿಗೆ ಉಗ್ರ ಶಿಕ್ಷೆಯನ್ನು ನೀಡಬೇಕು. ಈ ರೀತಿಯ ಕಾನೂನು ಕರ್ನಾಟಕದಲ್ಲಿ ಜಾರಿಗೆ ತರಬೇಕು. ನಮ್ಮ ಜನಸಂಖ್ಯೆಗೆ ಹೋಲಿಸಿದ್ರೆ ಪೊಲೀಸರ ಸಂಖ್ಯೆ ಕಡಿಮೆ ಇದೆ.
ಪದೇಪದೆ ಎಲ್ಲಾ ಬೀದಿಗಳಲ್ಲಿ ಪೊಲೀಸರು ಸಂಚಾರ ಮಾಡೋದಕ್ಕೆ ಆಗೋದಿಲ್ಲ. ಆದರೆ, ಅವರ ಕೆಲಸ ಅವರು ಮಾಡುತ್ತಿದ್ದಾರೆ. ಯಾರು ಈ ಕೆಲಸ ಮಾಡಿದ್ದಾರೆ, ಅಂತವರಿಗೆ ಶಿಕ್ಷೆ ಆಗುತ್ತದೆ. ಈ ಬಗ್ಗೆ ಪತ್ತೆ ಹಚ್ಚುವ ಕೆಲಸ ರಾಜ್ಯ ಸರ್ಕಾರ ಕೂಡಲೇ ಮಾಡಲಿದೆ ಎಂದರು.