ಚಿಕ್ಕಮಗಳೂರು:ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿಯಾಗಿ ರೈಲ್ವೇ ವಿಚಾರಗಳಿಗೆ ಸಂಬಂಧಿಸಿದ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದ್ದಾರೆ.
ರೈಲ್ವೆ ಸಚಿವರನ್ನು ಭೇಟಿ ಮಾಡಿದ ಸಂಸದೆ ಶೋಭಾ ಕರಂದ್ಲಾಜೆ - undefined
ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಭೇಟಿ ಮಾಡಿದ್ದು, ಚಿಕ್ಕಮಗಳೂರು ಜಿಲ್ಲೆಯ ರೈಲ್ವೆಗೆ ಸಂಬಂಧಿಸಿದಂತೆ ಹಲವಾರು ಸಮಸ್ಯೆ ಹಾಗು ಬೇಡಿಕೆಗಳ ಕುರಿತು ತಿಳಿಸಿದ್ದಾರೆ.

ಚಿಕ್ಕಮಗಳೂರು-ಹಾಸನ ಹೊಸ ರೈಲ್ವೆ ಲೈನ್ ಆರಂಭಿಸಬೇಕು. ಶಿವಮೊಗ್ಗದಿಂದ ಬೆಂಗಳೂರಿಗೆ ಸಂಚರಿಸುವ ಶತಾಬ್ದಿ ರೈಲು ತರೀಕೆರೆಯಲ್ಲಿ ತಾಲೂಕಿನಲ್ಲಿ ನಿಲುಗಡೆ ಮಾಡಬೇಕು. ಸಿಟಿ ರೈಲುಗಳನ್ನು ಕಡೂರು ತಾಲೂಕಿನ ದೇವನೂರು ರೈಲ್ವೆ ಸ್ಟೇಷನ್ನಲ್ಲಿ ನಿಲುಗಡೆ ಮಾಡಬೇಕು.ಪ್ಯಾಸೆಂಜರ್ ರೈಲು ತರೀಕೆರೆಯ ಬೇಲೇನಹಳ್ಳಿಯಲ್ಲಿ ನಿಡುಗಡೆ ಮಾಡಬೇಕು. ಚಿಕ್ಕಮಗಳೂರು-ಯಶವಂತಪುರ ಎಕ್ಸ್ಪ್ರೆಸ್ ಸ್ಫೀಡ್ಅಪ್ ಮಾಡಿ ಪ್ರಯಾಣದ ಸಮಯ ಕಡಿತ ಮಾಡಬೇಕು. ತರೀಕೆರೆ ರೈಲ್ವೇ ನಿಲ್ಡಾಣವನ್ನು ಹೈಟೆಕ್ ಮಾಡುವಂತೆ ಆಗ್ರಹಿಸಿ ಕೇಂದ್ರ ಸಚಿವರಿಗೆ ಸಂಸದೆ ಮನವಿ ಸಲ್ಲಿಸಿದ್ದು, ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸುವ ಭರವಸೆಯನ್ನು ಕೇಂದ್ರ ಸಚಿವರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.