ಚಿಕ್ಕಮಗಳೂರು:ಈ ವರ್ಷವನ್ನು ಪರೀಕ್ಷೆ ರಹಿತ ವರ್ಷವೆಂದು ಘೋಷಿಸುವಂತೆ ಸಂಸದೆ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಯಾವುದೇ ಕಾರಣಕ್ಕೂ ಶಾಲೆ ಆರಂಭಿಸುವುದು ಬೇಡ: ಸಂಸದೆ ಶೋಭಾ ಕರಂದ್ಲಾಜೆ - Shobha Karandlaje
2020 ಜೀವ ಉಳಿಸುವ ವರ್ಷವಾಗಿದೆ. ಮೊದಲು ಜೀವ ಉಳಿಸೋಣ, ಆಮೇಲೆ ಜೀವನ ಮಾಡೋಣವೆಂದು ಪ್ರಧಾನಿ ಮೋದಿ ಹೇಳಿದ್ದಾರೆ. ಹೀಗಾಗಿ, ಯಾವುದೇ ಕಾರಣಕ್ಕೂ ಶಾಲೆ ಆರಂಭಿಸುವುದು ಬೇಡವೆಂದು ಸಂಸದೆ ಶೋಭಾ ಕರಂದ್ಲಾಜೆ ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸಂಸದೆ ಶೋಭಾ ಕರಂದ್ಲಾಜೆ
ನಗರದಲ್ಲಿ ಮಾತನಾಡಿದ ಅವರು, 2020 ಜೀವ ಉಳಿಸುವ ವರ್ಷವಾಗಿದೆ. ಮೊದಲು ಜೀವ ಉಳಿಸೋಣ, ಆಮೇಲೆ ಜೀವನ ಮಾಡೋಣವೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹೀಗಾಗಿ ಆನ್ಲೈನ್ ಕ್ಲಾಸ್ ಮುಂದುವರೆಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದು, ಯಾವುದೇ ಕಾರಣಕ್ಕೂ ಪುನಾರಂಭಿಸುವುದು ಬೇಡ ಎಂದರು.
ಕರ್ನಾಟಕ ಸೇರಿದಂತೆ ದೇಶಾದ್ಯಂತ ಶಿಕ್ಷಕರ ಸಾವುಗಳು ಸಂಭವಿಸಿವೆ. ಶಿಕ್ಷಕರು ದೇಶದ ಆಸ್ತಿ. ಅಲ್ಲದೇ, ಈ ಸಮಯದಲ್ಲಿ ಪೋಷಕರು ತಮ್ಮ ಮಕ್ಕಳನ್ನ ಶಾಲೆಗೆ ಕಳಿಸುವ ಸ್ಥಿತಿಯಲ್ಲಿಯೂ ಇಲ್ಲವೆಂದು ತಿಳಿಸಿದರು.
TAGGED:
a year without a test