ಚಿಕ್ಕಮಗಳೂರು : ಜಿಲ್ಲೆಯಾದ್ಯಂತ ಶಿವರಾತ್ರಿ ಹಬ್ಬವನ್ನು ಸಂಭ್ರಮದಿಂದ ಜನರು ಆಚರಿಸುತ್ತಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಶಿವರಾತ್ರಿ ಹಬ್ಬದ ಸಡಗರ
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಶಿವರಾತ್ರಿ ಹಬ್ಬವನ್ನು ಜನರು ಸಂಭ್ರಮದಿಂದ ಆಚರಿಸುತ್ತಿದ್ದಾರೆ.
ಶಿವರಾತ್ರಿ
ಶಿವರಾತ್ರಿ ಹಿನ್ನೆಲೆ ಚಿಕ್ಕಮಗಳೂರು ನಗರದ ಬೋಳರಾಮೇಶ್ವರ ದೇವಸ್ಥಾನ ಮತ್ತು ಓಂಕಾರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಗಿದೆ. ದೇವಸ್ಥಾನದಲ್ಲಿರುವ ಪುರಾತನ ಕಾಲದ ಶಿವಲಿಂಗಕ್ಕೆ ಬೆಳಗ್ಗೆಯಿಂದಲೇ ಹಾಲು, ಮೊಸರು, ಎಳನೀರಿನ ಅಭಿಷೇಕ ಮಾಡಲಾಗುತ್ತಿದೆ.ದೇವರಿಗೆ ಹೂವಿನ ಅಲಂಕಾರ ಮಾಡಿ ಮಹಾ ಮಂಗಳಾರತಿ ನೆರವೇರಿಸಲಾಗಿದೆ.
ಬೆಳಗ್ಗೆಯಿಂದಲೂ ನೂರಾರು ಶಿವಭಕ್ತರು ದೇವಸ್ಥಾನಕ್ಕೆ ಬಂದು ಶಿವದರ್ಶನ ಪಡೆದು ಧನ್ಯರಾಗುತ್ತಿದ್ದಾರೆ.
Last Updated : Mar 13, 2019, 3:32 PM IST