ಚಿಕ್ಕಮಗಳೂರು:ಜಿಲ್ಲೆಯ ಅಜ್ಜಂಪುರ ತಾಲೂಕಿನ ಶಶಿಕುಮಾರ್ ಎಂಬ ಯುವಕ ಕಡು ಬಡತನದ ನಡುವೆಯೂ ತರಬೇತಿ ಪಡೆದು ಕಬಡ್ಡಿ ಆಟವನ್ನು ಕಲಿತು, ಇದೀಗ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ದಾವಣಗೆರೆಯಲ್ಲಿ ಆಟೋ ಓಡಿಸುತ್ತಲೇ ತರಬೇತಿ ಪಡೆದು, ಅಲ್ಲಿಂದ ಹಲವು ತಂಡಗಳಲ್ಲಿ ಆಡಿ ನಂತರ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇವರ ಈ ಸಾಧನೆಗೆ ಸ್ನೇಹಿತರು ಸಹ ಸಹಾಯವನ್ನು ಮಾಡಿದ್ದು, ಆಟದ ಜೊತೆಯಲ್ಲಿ ಕೆಲವೊಮ್ಮೆ ಹಣದ ನೆರವನ್ನು ನೀಡಿದ್ದಾರೆ.